ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮತದಾರರ ಹಕ್ಕುಗಳ ರಕ್ಷಣೆಗಾಗಿ ಬೃಹತ್ ಪ್ರತಿಭಟನಾ ರ್ಯಾಲಿ
ಹಳೆಯಂಗಡಿ:ಮುಲ್ಕಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗಾಗಿ ಬೃಹತ್ ಪಾದಯಾತ್ರೆ ಪ್ರತಿಭಟನಾ ರ್ಯಾಲಿ ಹಾಗೂ ಸಾರ್ವಜನಿಕ ಸಭೆ
ಶುಕ್ರವಾರ ಹಳೆಯಂಗಡಿ ಜಂಕ್ಷನ್ ಬಳಿ ನಡೆಯಿತು
ಪಾವಂಜೆ ಬಳಿಯಿಂದ ಬೃಹತ್ ಪಾದಯಾತ್ರೆಗೆ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಅಭಯ ಚಂದ್ರ ಜೈನ್ ಚಾಲನೆ ನೀಡಿದರು
ಬಳಿಕ ಹಳೆಯಂಗಡಿ ಜಂಕ್ಷನ್ ಬಳಿ ನಡೆದ ಬೃಹತ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಐಸಿಸಿ ವೀಕ್ಷಕ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಕಮಲೇಶ್ವರ ಪಟೇಲ್ ಮಾತನಾಡಿ ಕೇಂದ್ರದ ಬಿಜೆಪಿ ಸರಕಾರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಜೊತೆ ಸೇರಿಕೊಂಡು ಮತ ಕಳ್ಳತನದ ಮುಖಾಂತರ ಲೋಕ ತಂತ್ರವನ್ನು ಮುಗಿಸಲು ಹೊರಟಿದ್ದಾರೆ, , ಕೇಂದ್ರ ಬಿಜೆಪಿ ಸರಕಾರದ ಜೊತೆ ಸೇರಿಕೊಂಡು ಮತ ಕಳ್ಳತನದ ಸಂಚು ನಡೆಸುತ್ತಿರುವ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು ಹಾಗೂ ನಾಗರಿಕರು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಇದೆಯೇ ? ಎಂದು ಮರು ಪರಿಶೀಲಿಸಲು ವಿನಂತಿಸಿದರು
ಕೆಪಿಸಿಸಿ ಕಾರ್ಯಧ್ಯಕ್ಷ ಹಾಗೂ ವಿಧಾನಸಭಾ ಸದಸ್ಯ ಮಂಜುನಾಥ್ ಭಂಡಾರಿ, ಮಾತನಾಡಿ ಬಿಜೆಪಿ ಸರಕಾರದ ಮತ ಕಳ್ಳತನದ ವಿರುದ್ಧ ಹರಿಹಾಯ್ದರು
ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಮತದಾರರು ಮತ ಕಳ್ಳತನದ ವಿರುದ್ಧ ಜಾಗೃತಿ ವಹಿಸಬೇಕಾಗಿದೆ. ದೇಶಕ್ಕೆ ವಂಚಿಸುತ್ತಿರುವ ಬಿಜೆಪಿಯನ್ನು ಕಿತ್ತೊಗೆಯಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು
ಸಭೆಯಲ್ಲಿ ಕೆಪಿಸಿಸಿ ಉಸ್ತುವಾರಿ ವೆಂಕಟೇಶ್,ರಾಜ್ಯ ಗೇರು ನಿಗಮದ ಅಧ್ಯಕ್ಷೆ ಮಮತಾಗಟ್ಟಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ,ಮುಲ್ಕಿ ಹಾಗೂ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮೋಹನ್ ಕೋಟ್ಯಾನ್
ಪ್ರವೀಣ್ ಕುಮಾರ್ ಜೈನ್ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ ,ಕಾಂಗ್ರೆಸ್ ನಾಯಕರಾದ ಗೋಪಿನಾಥ ಪಡಂಗ ಗುರುರಾಜ್ ಎಸ್ ಪೂಜಾರಿ, ಪದ್ಮನಾಭ ಕೋಟ್ಯಾನ್
ರಕ್ಷಿತ್ ಕೊಳಚಿ ಕಂಬಳ , ಶಯನ್ ಶೆಟ್ಟಿಗಾರ್, ಮೋನಪ್ಪ ಶೆಟ್ಟಿ ಎಕ್ಕಾರು, ದೀಪಕ್ ಪೆರ್ಮುದೆ, ಅನಿತಾ ಅರಾಹ್ನ ಕಿನ್ನಿಗೋಳಿ, ಹಸನಬ್ಬ ಬಾಳ,ಜಲಜಾ ಪಾಣಾರ್, ಬಶೀರ್ ಕುಳಾಯಿ, ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು
ಪ್ರತಿಭಟನಾ ಸಭೆಯ ಮೊದಲು ಪಾವಂಜೆ ದೇವಸ್ಥಾನದ ಬಳಿಯಿಂದ ಹಳೆಯಂಗಡಿ ಜಂಕ್ಷನ್ವರೆಗೆ ಕಾಂಗ್ರೆಸ್ ನಾಯಕರಿಂದ ಮತದಾರರ ಹಕ್ಕುಗಳ ರಕ್ಷಣೆಗಾಗಿ ಬೃಹತ್ ಪಾದಯಾತ್ರೆ ನಡೆಯಿತು