ಹಳೆಯಂಗಡಿ: ಗ್ರಾಮ ಪಂಚಾಯತಿನ ಸಿಬ್ಬಂದಿ ಸುಷ್ಮಾ ತಾರಾನಾಥ ರವರಿಗೆ 2026 ನೇ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ.
ಹಳೆಯಂಗಡಿ :ಹಳೆಯಂಗಡಿ ಬಿಲ್ಲವ ಸಮುದಾಯದ ನಾಯಕನಾಗಿದ್ದ ದಿ ಸುಂದರ ಸನಿಲ್ ಅವರ ಮೊಮ್ಮಗಳು, ದಿ.ಶ್ರೀನಿವಾಸ್ ಸುವರ್ಣ ರವರ ಪುತ್ರಿ ಸುಷ್ಮಾ ಸುವರ್ಣ ರವರು ಕ್ರೀಡಾ ವಿಭಾಗದಲ್ಲಿ ಸಾಧಿಸಿದ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾ ಆಡಳಿತವು ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಹಳೆಯಂಗಡಿ ಗ್ರಾಮ ಪಂಚಾಯತಿನ ಸಿಬ್ಬಂದಿಯಾಗಿ
ಎಂ ಆರ್ ಪಿ ಎಲ್ ಸಂಸ್ಥೆಯ ಉದ್ಯೋಗಿಯಾದ
ತಾರಾನಾಥ ರವರ ಪತ್ನಿಯಾಗಿದ್ದಾರೆ.
2020 ಮತ್ತು 2024ನೇ ಅವಧಿಯಲ್ಲಿ ಕೇರಳದ ಕೋಯಿಕೊಡು ಮತ್ತು ತೆಲಂಗಾಣದಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನದ ಮತ್ತು ಬೆಳ್ಳಿಯ ಪದಗಳನ್ನು ಪಡೆದು ರಾಜ್ಯಕ್ಕೆ ಹೆಸರು ತಂದಿದ್ದಾರೆ.
2025ನೇ ಸಾಲಿನಲ್ಲಿ ಶ್ರೀಲಂಕಾದಲ್ಲಿ ನಡೆದ ಅಂತರ್ರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ 46 ಕ್ರೀಡಾಪಟುಗಳ ಪೈಕಿ ಇವರು ಕೂಡ ಒಬ್ಬರು.
ಈ ಕ್ರೀಡಾಕೂಟದಲ್ಲಿ ಶಾರ್ಟ್ ಪುಟ್ ನಲ್ಲಿ ಬಂಗಾರದ ಪದಕ ,100 ಮೀಟರ್ ಮತ್ತು ಟ್ರಿಪಲ್ ಜಂಪ್ ನಲ್ಲಿ ಬೆಳ್ಳಿಯ ಪದಕ ಮತ್ತು ಮಹಿಳೆಯರ ರಿಲೇಯಲ್ಲಿ ಕಂಚಿನ ಪದಕ ವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಡೆದು ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಇವರ ಕ್ರೀಡಾ ಸಾಧನೆಯನ್ನು ಗುರುತಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕರ್ನಾಟಕ ರಾಜ್ಯೋತ್ಸವ
ಪ್ರಶಸ್ತಿ ನೀಡಿ ಗೌರವಿಸಿದೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್, ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಉಪಸ್ಥಿತರಿದ್ದರು