ಗುರುಪುರ ಯುವಕ ಸಂಘದಿಂದ ಬಾಲ ಸಂರಕ್ಷಣಾ ಕೇಂದ್ರಕ್ಕೆ 280 ಕೆ.ಜಿ. ಅಕ್ಕಿ, ದಿನಸಿ ಸಾಮಗ್ರಿ ವಿತರಣೆ
ಸಂಘದ ಅಧ್ಯಕ್ಷ ನಿಖಿಲ್ ರಾಜ್ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ನವರಾತ್ರಿ ಸಂದರ್ಭದಲ್ಲಿ ಶಾರ್ದೂಲ ವೇಷ ಧರಿಸಿ ಸಂಗ್ರಹಿಸಿದ ಮೊತ್ತದಿಂದ 280 ಕೆ.ಜಿ. ಅಕ್ಕಿ, ವಿವಿಧ ದಿನಸಿ ಸಾಮಗ್ರಿಗಳು ಹಾಗೂ ಸಿಹಿ ತಿಂಡಿಗಳನ್ನು ಕೇಂದ್ರಕ್ಕೆ ನೀಡಲಾಯಿತು. ಅಲ್ಲದೆ, ಕೇಂದ್ರದ ಮಕ್ಕಳಿಗೆ ಐಸ್‌ಕ್ರೀಂ ವಿತರಿಸಿ ಅವರೊಂದಿಗೆ ಸಂತಸ ಹಂಚಿಕೊಂಡರು.
ಸಾಮಾಜಿಕ ಸೇವೆಯ ಉದ್ದೇಶದಿಂದ ಹಮ್ಮಿಕೊಂಡ ಈ ಕಾರ್ಯಕ್ರಮದ ಮೂಲಕ ಬಾಲ ಸಂರಕ್ಷಣಾ ಕೇಂದ್ರದ ಮಕ್ಕಳಿಗೆ ನೆರವಿನ ಹಸ್ತ ಚಾಚುವ ಮೂಲಕ ಸಂಘದ ಸದಸ್ಯರು ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ನಿಖಿಲ್ ರಾಜ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.