ಉಲ್ಲಂಜೆ ಕ್ಷೇತ್ರದ ವತಿಯಿಂದ ಜೀ ಕನ್ನಡ ಲಿಟ್ ಚಾಂಪ್ಸ್ 2026 ವಿಜೇತ ಅಸ್ಮಿತ್ ಎಜೆ ರವರಿಗೆ ಗೌರವಾರ್ಪಣೆ
ಕಟೀಲು:ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರಿ ಗುಳಿ ಗ ಭದ್ರಕಾಳಿ ಸನ್ನಿಧಿ ಉಲ್ಲಂಜೆ ನವರಾತ್ರಿ ಪ್ರಯುಕ್ತವಾಗಿ ಕ್ಷೇತ್ರಕ್ಕೆ ಆಗಮಿಸಿದ ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ 2026 ರ ವಿಜೇತ ಮಾಸ್ಟರ್ ಅಸ್ಮಿತ್ ಎ ಜೆ ಇವರನ್ನು ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ಹಾಗೂ ಸೇವಾ ಭಕ್ತವ್ರoದ ಸಮಿತಿಯಿಂದ ಗೌರವಿಸಿದರು . ಈ ಸಂದರ್ಭದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಕೌನ್ಸಿಲರ್ ಪ್ರಕಾಶ್ ಕಿನ್ನಿಗೋಳಿ, ಶೇಖರ ಪೂಜಾರಿ ದೈವ ಮಧ್ಯಸ್ಥ, ಅಮ್ಮಿ ಶಂಬುರೂ, ಶೇಖರ ಪೂಜಾರಿ, ಆನಂದ ಪೂಜಾರಿ, ಗಣೇಶ್,ರಘು, ನವೀನ್ ಕುಲಾಲ್, ಸುರೇಶ್ ಪೂಜಾರಿ, ಸತೀಶ್ ಪೂಜಾರಿ ಸುರೇಶ್ ಎಸ್ ಪಿ ಎಸ್, ಕರುಣಾಕರ್ ಮಾಣಿ, ಅರ್ಜುನ್ ಮೂಡಬಿದ್ರಿ, ಕಾರ್ತಿಕ್ ಕೌಶಿಕ್. ಯೋಗೀಶ್ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು.