Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಡುಪಿಯಲ್ಲಿ ಪ್ರಿಯದರ್ಶಿನಿ ಸೊಸೈಟಿ ನೂತನ ಶಾಖೆ ಆರಂಭ

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ಹಳೆಯಂಗಡಿಯಲ್ಲಿ ಪ್ರಧಾನಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯು ಉಡುಪಿಯ ತಾಲೂಕು ಕಚೇರಿ ಬಳಿಯ ಸನಿಲ್ ಪ್ಲಾಜಾ ಕಟ್ಟಡದಲ್ಲಿ ಅ. 25 ರ ಭಾನುವಾರ ಪ್ರಾರಂಭಗೊಂಡಿತು 
ನೂತನ ಶಾಖೆಯನ್ನು  ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಉದ್ಘಾಟಿಸಿ ಮಾತನಾಡಿ ಸಹಕಾರಿರಂಗದ  ದಿಗ್ಗಜರಾದ ದಿ.ಎಚ್ ನಾರಾಯಣ ಸನಿಲ್ ಹಳೆಯಂಗಡಿ ಮತ್ತು ದಿ.ಪಂಜದಗುತ್ತು ಶಾಂತರಾಮ ಶೆಟ್ಟಿರವರ ಪ್ರೇರಣೆಯಂತೆ ಕಳೆದ ಐದು 5 ವರ್ಷಗಳ  ಹಿಂದೆ ಹಳೆಯಂಗಡಿಯಲ್ಲಿ ಪ್ರಾರಂಭಗೊಂಡ  ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಜನಸೇವೆ ಮಾಡುತ್ತಿದೆ. ಸಂಘದ ಅಧ್ಯಕ್ಷ ವಸಂತ್ ಬೆರ್ನಾಡ್ ಹಾಗೂ ನಿರ್ದೇಶಕರ ಹಾಗೂ ಸಿಬ್ಬಂದಿ ವರ್ಗ ನೇತೃತ್ವದಲ್ಲಿ ಪ್ರಗತಿಯತ್ರ ಸಾಗುತ್ತಿದೆ
ಇದೀಗ ಸಂಘದ ಐದನೇ ಶಾಖೆ ಉಡುಪಿಯಲ್ಲಿ ಉದ್ಘಾಟನೆಗೊಂಡಿದ್ದು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಲ್ಲಿ 50 ಶಾಖೆಗಳಾಗಿ ಸಂಘ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಶುಭ ಹಾರೈಸಿದರು
ದೀಪ ಪ್ರಜ್ವಲನೆಯನ್ನು ಕರ್ನಾಟಕ ಸರಕಾರದ ಮಾಜೀ ಸಚಿವರಾದ  ಕೆ. ಅಭಯಚಂದ್ರ ಜೈನ್ ರವರು,ನೆರವೇರಿಸಿ ಮಾತನಾಡಿ ಸಹಕಾರಿ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರಿ ಸಮಾನವಾಗಿ ಸ್ಪರ್ಧೆ ನೀಡುತ್ತಿದ್ದು ಮಹಿಳೆಯರಿಗೆ ಉದ್ಯೋಗಾವಕಾಶ ಹಾಗೂ ಪ್ರಾಮಾಣಿಕತೆ ಮೂಲಕ ಯಶಸ್ವಿಯಾಗಿದೆ ಅಭಿವೃದ್ಧಿ ಮೂಲ ಮಂತ್ರವಾಗಲಿ ಎಂದರು
ಭದ್ರತಾಕೊಠಡಿ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಐವನ್ ಡಿ'ಸೋಜರವರು, ಕಂಪ್ಯೂಟರ್ ವ್ಯವಸ್ಥೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ಎಮ್‌ ರೈರವರು,  ಪ್ರಿಯದರ್ಶಿನಿ ಸ್ವ-ಸಹಾಯ ಗುಂಪಿಗೆ ಚಾಲನೆಯನ್ನು ಕರ್ನಾಟಕರಾಜ್ಯ ಹಾಲು ಉತ್ಪಾದಕರಒಕ್ಕೂಟ (ಏಒಈ) ಮತ್ತುದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ ನಿರ್ದೇಶಕರಾದಡಾ. ಐಕಳಬಾವ ಡಾ.ದೇವಿ ಪ್ರಸಾದ್ ಶೆಟ್ಟಿಯವರುಗೈದರು ನೆರವೇರಿಸಿದರು
ಮಾಜೀ ಸಚಿವ ವಿನಯ ಕುಮಾರ್ ಸೊರಕೆ ಶುಭ ಹಾರೈಸಿದರು 
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ. ಆರ್‌, ಉಡುಪಿ ಜಿಲ್ಲಾಕೇಂದ್ರ ಸಹಕಾರಿಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಉಡುಪಿ ಪಡುಕುತ್ಯಾರ್‌ ಸರಸ್ವತಿ ಕೋ ಆಪರೇವಿಟ್ ಸೊಸೈಟಿ ಅಧ್ಯಕ್ಷ  ಬಿ. ಸೂರ್‍ಯಕುಮಾರ್‌, ಲೊಂಬಾರ್ಡ್ ಮೆಮೋರಿಯಲ್‌ ಆಸ್ಪತ್ರೆ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ ,ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿ ಎಂ.ಡಿ. ಡಾ| ಟಿ. ಎಸ್. ರಾವ್, ಎಂ ಎಸ್  ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ  ಶ್ರೀಧರ್ ದೇವಾಡಿಗ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಮೇಶ್‌ಕಾಂಚನ್‌,  ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್‌, ಮುಲ್ಕಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷೆ  ಶರ್ಲಿ ಸುಮಾಲಿನಿ,ಕಟ್ಟಡ ಮಾಲೀಕ ಶಂಭು ಎ. ಸನಿಲ್,
 ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ  ಅಧ್ಯಕ್ಷ ಎಚ್ ವಸಂತ್ ಬೆರ್ನಾರ್ಡ್ , ಉಪಾಧ್ಯಕ್ಷ ವಿಜಯಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ್ ಜೆ ಶೆಟ್ಟಿಗಾರ್, ಧನಂಜಯ ಮಟ್ಟು , ಗೌತಮ್ ಜೈನ್, ಗಣೇಶ ಪ್ರಸಾದ್ ದೇವಾಡಿಗ, ಜೈ ಕೃಷ್ಣ ಕೋಟ್ಯಾನ್,, ಡಾ. ಶೆರಿಲ್ ಆಯೋನಾ ಐಮನ್,ರೇಖಾ ಶೆಟ್ಟಿ, ಹರೀಶ್ ಎನ್ ಪುತ್ರನ್ ಸಸಿಹಿತ್ಲು,ನವೀನ್ ಸಾಲ್ಯಾನ್ ಪಂಜ, ಮೋಹನ ದಾಸ್, ಅನಿಲ್ ಪೂಜಾರಿ ಸಸಿಹಿತ್ಲು, ರಜಿಯಾ ಭಾನು, ಕರಿಯ ಕಾಡಿಗ, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ,ಉಡುಪಿ ಶಾಖಾ ಪ್ರಬಂಧಕರಾದ ನಿಶಾ ಸುಹೈಲ್‌ ಡೇನಿಯಲ್,ಎಪಿ ಎಂ ಸಿ ಮಾಜೀ ಅಧ್ಯಕ್ಷ ಪ್ರಮೋದ್ ಕುಮಾರ್ ಕಿನ್ನಿಗೋಳಿ,ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಶಶೀoದ್ರ ಸಾಲ್ಯಾನ್ ಹಳೆಯಂಗಡಿ, ಅಶೋಕ್ ಪೂಜಾರ, ಮಂಜುನಾಥ ಕಂಬಾರ, ಸುಭಾಶ್ಚಂದ್ರ  ಕೆಎಸ್ ರಾವ್ ನಗರ,ಧರ್ಮಾನಂದ ಶೆಟ್ಟಿಗಾರ್, ಸಂತೋಷ್ ಪೂಜಾರಿ ಕೊಪ್ಪಲ ಹಳೆಯಂಗಡಿ ಮತ್ತಿತರರು
ಉಪಸ್ಥಿತರಿದ್ದರು.
ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್  ಸ್ವಾಗತಿಸಿದರು,ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಧನ್ಯವಾದ ಅರ್ಪಿಸಿದರು
ಪ್ರಕಾಶ್ ಕಿನ್ನಿಗೋಳಿ ನಿರೂಪಿಸಿದರು.