ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು 9ನೇ ವರ್ಷದ ಶರನ್ನವರಾತ್ರಿ ಮಹೋತ್ಸವ
ಉಡುಪಿ:ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು 9ನೇ ವರ್ಷದ ಶರನ್ನವರಾತ್ರಿ ಮಹೋತ್ಸವವು ಆರಂಭಗೊಂಡಿತು. ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ರವರು ದೀಪ ಬೆಳಗಿಸಿದರು.ಟ್ರಸ್ಟಿಗಳಾದ ಜನಾರ್ದನ ದೇವಾಡಿಗ ಬಾರಕೂರು,ರಘುರಾಮ್ ದೇವಾಡಿಗ ಆಲೂರು, ವ್ಯವಸ್ಥಾಪನ ಸಮಿತಿಯ ಕಾರ್ಯಧ್ಯಕ್ಷ ಜನಾರ್ದನ ಪಡುಪಣಂಬೂರು, ಪ್ರದಾನ ಕಾರ್ಯದರ್ಶಿ ಗಣೇಶ್ ದೇವಾಡಿಗ ಅಂಬಲಪಾಡಿ, ಉಪಾಧ್ಯಕ್ಷ ಚೆನ್ನಪ್ಪ ಮೊಯಿಲಿ, ರಾಜೇಶ್ ತ್ರಾಸಿ, ಕೋಶಾಧಿಕಾರಿ ನಾರಾಯಣ ದೇವಾಡಿಗ ಕುಂದಾಪುರ ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗ, ಕಿನ್ನಿಮುಲ್ಕಿ ಸದಾನಂದ ಶೇರಿಗಾರ್ ಕಾವೂರ್ ಮತ್ತಿತರರು ಉಪಸ್ಥಿತರಿದ್ದರು.