Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತೋಕೂರು:ಶ್ರೀದುರ್ಗಾದೇವಿಗೆ ದುರ್ಗಾನಮಸ್ಕಾರ ಪೂಜೆ

ತೋಕೂರು:ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಹಳೆಯಂಗಡಿ ಇಲ್ಲಿ ನವರಾತ್ರಿ ಪ್ರಯುಕ್ತ ಪ್ರಥಮ ದಿನ ಶ್ರೀ ದುರ್ಗಾದೇವಿಗೆ ದುರ್ಗಾನಮಸ್ಕಾರ ಪೂಜೆಯು ಬ್ರಹ್ಮಶ್ರೀ ಶಿಬರೂರು ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇವಳದ ಪ್ರಧಾನ ಅರ್ಚಕ ಟಿ.ಕೆ ಮಧುಸೂಧನ್ ಆಚಾರ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ ಶೆಟ್ಟಿ ತೋಕೂರಗುತ್ತು, ಅಶೋಕ್ ಕುಂದರ್, ಸವಿತಾ ಬೆಳ್ಳಾಯರು, ನಿಕಟ ಪೂರ್ವ ಅಧ್ಯಕ್ಷರಾದ ಹರಿದಾಸ್ ಭಟ್,   ಅನ್ನಸಂಪರ್ಪಣೆಯ ಸೇವಕರ್ತರಾದ ಎಸ್.ವಿ ಅಂಚನ್  ಯು.ಎಸ್.ಎ ಮತ್ತು ನೀಲಿಮಾ ರಾವ್, ಬೆಂಗಳೂರು ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ  ಉಪಸ್ಥಿತರಿದ್ದರು.