ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಸಿದ್ಧತಾ ಸಭೆ.
ತೋಕೂರು:ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರಿನಲ್ಲಿ ಡಿ.9 ರಿಂದ ಡಿ.12 ರ ತನಕ ನಡೆಯಲಿರುವ ವಾರ್ಷಿಕ ಷಷ್ಠಿ ಮಹೋತ್ಸವದ ವ್ಯವಸ್ಥೆ ಬಗ್ಗೆ ವಿಚಾರ ವಿನಿಮಯ ಮಾಡಲು ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆಗಳ ಸಭೆಯು ದೇವಸ್ಥಾನದ ಸಭಾಭವನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಭೆಯಲ್ಲಿ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ ಮಾತನಾಡಿ ಷಷ್ಠಿ ಮಹೋತ್ಸವದ ಸಮಯದ ವ್ಯವಸ್ಥೆಗಾಗಿ ಉಪಸಮಿತಿಗಳನ್ನು ರಚಿಸಲಾಗಿದ್ದು,09.12.2026ರಿಂದ 16.12.2026ವರೆಗೆ ವಾರ್ಷಿಕ ಷಷ್ಠಿ ಮಹೋತ್ಸವ ಮತ್ತು ದೈವದ ನೇಮೋತ್ಸವ ನಡೆಯಲಿದೆ. ಪ್ರತಿ ದಿನ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ಈ ಎಲ್ಲಾ ಕಾರ್ಯಕರ್ಮಕ್ಕೆ ಗ್ರಾಮಸ್ಥರ ,ಸಂಘ ಸಂಸ್ಥೆಗಳ, ಭಕ್ತರ ಸಹಕಾರ ಅಗತ್ಯ ಎಂದರು. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಸದಸ್ಯರಾದ ಟಿ.ಕೆ ಮಧುಸೂದನ್ ಆಚಾರ್, ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ವಿಶ್ವನಾಥ್, ಸವಿತಾ ಬೆಳ್ಳಾಯರು, ಶೋಭಾ ವಿ.ಅಂಚನ್, ನಿಕಟಪೂರ್ವ ಅಧ್ಯಕ್ಷರಾದ ಹರಿದಾಸ್ ಭಟ್, ನಿಕಟಪೂರ್ವ ಸದಸ್ಯರಾದ ಲೋಕಯ್ಯ ಸಾಲಿಯಾನ್, ವಿಪುಲಾ ಡಿ. ಶೆಟ್ಟಿಗಾರ್, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು, ವ್ಯವಸ್ಥಾಪನಾ ಸಮಿತಿಯ ಸದಸ್ಯ ಪುರುಷೋತ್ತಮ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು, ವ್ಯವಸ್ಥಾಪನಾ ಸಮಿತಿ ಸದಸ್ಯೆ ಸವಿತಾ ಬೆಳ್ಳಾಯರು ವಂದಿಸಿದರು.