Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತೋಕೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ 10ನೇ ವರ್ಷದ ಅಮ್ಮ ನೆಡೆಗೆ ನಮ್ಮ ನಡೆ ಪಾದಯಾತ್ರೆ

ತೋಕೂರು:ಜಿಲ್ಲಾ, ರಾಜ್ಯ, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ.), ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ  ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ 10ನೇ ವರ್ಷದ “ಅಮ್ಮನೆಡೆಗೆ ನಮ್ಮ ನಡಿಗೆ” ಪಾದಯಾತ್ರೆಯು ಅ, 18 ರ ಭಾನುವಾರ ನಡೆಯಿತು.

 ಸಂಸ್ಥೆಯ ಅಧ್ಯಕ್ಷ ಸುರೇಶ್ ಶೆಟ್ಟಿ ಈ ಸಂದರ್ಭ ಮಾತನಾಡಿ  “ತಾಯಿಯೆಡೆಗೆ ಮಕ್ಕಳು ಜೊತೆಯಾಗಿ ಬರುವುದು ಸಂಭ್ರಮದ ಕ್ಷಣ. ಅದೇ ರೀತಿ ಭಕ್ತರು ದೇವರ ಸನ್ನಿಧಿಗೆ ಭಕ್ತಿಭಾವದಿಂದ ಆಗಮಿಸುವುದು ವಿಶೇಷ ಅನುಭವ. ಇಂತಹ ಧಾರ್ಮಿಕ ಸಂಭ್ರಮದಲ್ಲಿ ನಾವೂ ಪಾಲ್ಗೊಂಡಿದ್ದೇವೆ” ಎಂದರು.

ಪಾದಯಾತ್ರೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಸದಸ್ಯೆಯರು, ಗ್ರಾಮಸ್ಥರು ಹಾಗೂ ಇತರ ಭಕ್ತಾದಿಗಳು ಭಾಗವಹಿಸಿದರು.