Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪುನರೂರು:ಬ್ರಹ್ಮಕಲಶೋತ್ಸವಕ್ಕೆಭಕ್ತರ ಹಾಗೂ ದಾನಿಗಳ ಸಹಕಾರ ಬೇಕು- ಪಟೇಲ್ ವಾಸುದೇವ ರಾವ್

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಪುನರೂರು ಶ್ರೀ ವಿಶ್ವನಾಥ ದೇವರ ಬ್ರಹ್ಮ ಕಲಶೋತ್ಸವು ಮುಂದಿನ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಸಮಿತಿಯ ಹಾಗೂ ಗ್ರಾಮಸ್ಥರ ಸಭೆ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು 
ಸಭೆಯಲ್ಲಿ ದೇವಸ್ಥಾನದ  ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ಮಾತನಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಶ್ರೀ ದೇವರ ಅನುಗ್ರಹ ಇದೆ ಭಕ್ತರ ಹಾಗೂ ದಾನಿಗಳ ಸಹಕಾರ ಬೇಕು ವಿವಿಧ ಸಮಿತಿಯ ಸದಸ್ಯರು ನಿಸ್ವಾರ್ಥ ಸೇವೆ ಮಾಡಿದರೆ ಬ್ರಹ್ಮಕಲಶೋತ್ಸವ ಯಶಸ್ಸು ಸಾಧ್ಯ ಎಂದರು
ಸಭೆಯಲ್ಲಿ ಮುಖ್ಯ ಅತಿಗಳಾಗಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು, ಕಾರ್ಯಾಧ್ಯಕ್ಷ ಪುರಂದರ ಶೆಟ್ಟಿಗಾರ್,ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ,  ಸಮಿತಿಯ ಉಷಾ ಹರಿಕೃಷ್ಣ ಪುನರೂರು ಪದಾಧಿಕಾರಿಗಳಾದ ಸುರೇಶ್ ರಾವ್ ನೀರಳಿಕೆ,ಶಂಕರ್ ಮಾಸ್ಟರ್ ಗೋಳಿ ಜೋರಾ, ರವಿ ಶೆಟ್ಟಿ ಪುನರೂರು ಗುತ್ತು,ಸುರೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು 
ಸಭೆಯಲ್ಲಿ ಮಾಧವ ಶೆಟ್ಟಿಗಾರ್ ಹಾಗೂ ರಾಜೇಶ್ ಪಿ ಆರ್ ಕೆರೆಕಾಡು ಮಾತನಾಡಿದರು
ಸಮಿತಿಯ ಸುಧಾಕರ ರಾವ್ ನಿರೂಪಿಸಿದರು 
 ಸಭೆಯಲ್ಲಿ ಸಕ್ರಿಯ ಸದಸ್ಯರ ಬೇರೆ ಬೇರೆ ಸಮಿತಿ  ರಚನೆ ಮತ್ತು ಆಮಂತ್ರಣ ಪತ್ರಿಕೆ ಮುದ್ರಣ.ಸ್ಥಳೀಯ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಊರಿನ. ಪರ ಊರಿನ  ಭಕ್ತರನ್ನು ಒಳಗೊಂಡ ಮಹಿಳಾ ಮಂಡಳಿ ಸಹಿತ ಸಮಗ್ರ ಸಮಿತಿ ರಚನೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು  ಬ್ರಹ್ಮಕಲಶೋತ್ಸವ ಲಾಂಛನ ಬಿಡುಗಡೆ ನಡೆಯಿತು