Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅ.15:ಪೆರ್ಮುದೆಯ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ವಜ್ರ ಮಹೋತ್ಸವ ಸಂಭ್ರಮಾಚರಣೆ ಹಾಗೂ ನವೀಕೃತ ದೇವಾಲಯದ ಆಶಿರ್ವಚನ ಕಾರ್ಯಕ್ರಮ

ಬಜಪೆ:ಪೆರ್ಮುದೆಯ ಸಂತ ಸ್ನಾನಿಕ ಯೋಹಾನ್ನ ದೇವಾಲಯದ ವಜ್ರ ಮಹೋತ್ಸವ ಸಂಭ್ರಮಾಚರಣೆ ಹಾಗೂ ನವೀಕೃತ ದೇವಾಲಯದ ಆಶಿರ್ವಚನ ಕಾರ್ಯಕ್ರಮವು ಅ.15 ರ ಗುರುವಾರದಂದು ಸಂಜೆ 3 ಕ್ಕೆ ನಡೆಯಲಿದೆ.ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ಅತೀ ವಂ .ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾರವರು ಉದ್ಘಾಟಿಸಲಿರುವರು.ಮಂಗಳೂರು ಧರ್ಮಪ್ರಾಂತ್ಯದ  ಧರ್ಮಾಧ್ಯಕ್ಷ ಅತೀ ವಂ.ಡಾ.ಪೀಟರ್ ಪಾವ್ಲ್ ಸಲ್ದಾನ್ಹಾ ಆಶೀರ್ವಚನ ಹಾಗೂ ಬಲಿಪೂಜೆಯನ್ನು ನೆರವೇರಿಸಲಿರುವರು.ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ.ಡಾ.ಫ್ರಾನ್ಸಿಸ್ ಸೆರಾವೊ ಪ್ರವಚನ ಗೈಯಲಿರುವರು.ಸಂಜೆ 6 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬೃಜೇಶ್ ಚೌಟ,ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್,ಶಾಸಕ ಉಮಾನಾಥ ಕೋಟ್ಯಾನ್,ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ,ಮಹಾದಾನಿಗಳಾದ ರೊನಾಲ್ಡ್ ಪ್ರೆಸಿಲ್ಲಾ ಫೆರ್ನಾಂಡಿಸ್,ಮಾರ್ಕ್ ಸ್ಟೆಲ್ಲಾ ಡಿಸೋಜ,ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತಧರ್ಮಾಧ್ಯಕ್ಷ ವಂ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ,ಮೈಸೂರು ಧರ್ಮಾಧ್ಯಕ್ಷ ವಂ.ಡಾ.ಫ್ರಾನ್ಸಿಸ್ ಸೆರಾವೊ,ಪೇಜಾವರ ವಲಯ ಪ್ರಧಾನ ಧರ್ಮಗುರು ವಂ.ರವಿ ರುಡಾಲ್ಪ್ ಡೆಸಾ,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ),ಪೆರ್ಮುದೆಯ ಪವಿತ್ರ ಪಾಣಿಗಳಾದ ವೇಣುಗೋಪಾಲ ಪೆಜತ್ತಾಯ,ಮಂಗಳೂರು ಶಾಂತಿ ಪ್ರಕಾಶನದ ನಿರ್ದೇಶಕ ಮೊಹಮ್ಮದ್ ಕುಂಞಿ ಹಾಗೂ ಗಣ್ಯಾತೀಗಣ್ಯರು ಉಪಸ್ಥಿತಲಿರುವರು.ಸಭಾ ಕಾರ್ಯಕ್ರಮದ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.ರಾತ್ರಿ 9:30 ಕ್ಕೆ ಚಾ ಪರ್ಕ ಕಲಾವಿದೆರ್ ಕುಡ್ಲ ಅಭಿನಯಿಸುವ ತೆಲಿಕೆದ ಬೊಳ್ಳಿ ಡಾ.ದೇವಿದಾಸ್ ಕಾಪಿಕಾಡ್ ರವರ ವಿನೂತನ ತುಳು ಹಾಸ್ಯಮಯ ನಾಟಕ ಸುಣ್ಣದ ಬೊಟ್ಟು ಪ್ರದರ್ಶನವಾಗಲಿದೆ.ಅ.11 ರಂದು ಪೆರ್ಮುದೆಯ ರೆಯಾನ್ ಹಾಲ್ ನಿಂದ ಪೆರ್ಮುದೆ ಚರ್ಚ್ ತನಕ ಭವ್ಯ ಹೊರೆಕಾಣಿಕೆ ಮೆರವಣಿಗೆ ಹಾಗೂ ಧರ್ಮಗುರುಗಳ ನಿವಾಸದ ಉದ್ಘಾಟನೆಯು ನಡೆಯಲಿದೆ.