ಮುಲ್ಕಿ: ಸಾರ್ವಜನಿಕ ಶಾರದಾ ಮಹೋತ್ಸವದ ವಿಸರ್ಜನಾ ಶೋಭಾಯಾತ್ರೆ
ಮುಲ್ಕಿ: ಹಿಂದೂ ಯುವ ಸೇನೆ ಮತ್ತು ಮಹಿಳಾ ಮಂಡಳಿ ಆಶ್ರಯದಲ್ಲಿ 28ನೇ ವರ್ಷದ ಸಾರ್ವಜನಿಕ ಶಾರದಾ ಮಹೋತ್ಸವದ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು
ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಅರ್ಚಕ ಪ್ರಶಾಂತ್ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಬಳಿಕ ವಿಸರ್ಜನಾ ಪೂಜೆ ನಡೆದು ಭವ್ಯ ಶೋಭಾ ಯಾತ್ರೆ ಶಿವಾಜಿ ಮಂಟಪದಿಂದ ಹೊರಟು ಬಪ್ಪನಾಡು ದೇವಸ್ಥಾನ, ಪಂಚಮಹಲ್ ರಸ್ತೆ, ಬಿಲ್ಲವ ಸಮಾಜ ಸೇವಾ ಸಂಘ,ಮುಲ್ಕಿ ಬಸ್ ನಿಲ್ದಾಣ , ಬಡಗುಹಿತ್ಲು ಶಾಂಭವಿ ನದಿಯಲ್ಲಿ ಶ್ರೀ ಶಾರದಾಮಾತೆಯ ವಿಗ್ರಹವನ್ನು ಜಲಸ್ತಂಭನ ಗೊಳಿಸಲಾಯಿತು
ಈ ಸಂದರ್ಭ ಹಿಂದೂ ಯುವ ಸೇನೆ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಕೆಎಸ್ ರಾವ್ ನಗರ, ಉಪಾಧ್ಯಕ್ಷ ಸತೀಶ್ ಬಂಗೇರ ಚಿತ್ರಾಪು , ಜಗನ್ನಾಥ ಶಿಮಂತೂರು, ಪ್ರಧಾನ ಕಾರ್ಯದರ್ಶಿ ಅಶ್ವಥ್ ಕೊಲಕಾಡಿ, ಕೋಶಾಧಿಕಾರಿ ಸುನಿಲ್ ಕುಮಾರ್ ಕಿಲ್ಪಾಡಿ, ಜೊತೆ ಕಾರ್ಯದರ್ಶಿ ಶೈಲೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿಗಳಾದ ಶಂಕರ್ ಪಡಂಗ, ಸಂತೋಷ್ ಶೆಟ್ಟಿ, ಮಾಜೀ ಅಧ್ಯಕ್ಷ ಉಮೇಶ್ ಮಾನಂಪಾಡಿ, ಪದಾಧಿಕಾರಿಗಳಾದ
ಜೀವನ್ ಪೂಜಾರಿ ,ದಿನೇಶ್ ಕೋಲ್ನಾಡ್,ಮಹಿಳಾ ಮಂಡಳಿ ಅಧ್ಯಕ್ಷೆ ಲತಾ ಶೇಖರ್, ಉಪಾಧ್ಯಕ್ಷೆ ರಾಧಿಕಾ ಕೋಟ್ಯಾನ್, ಕಾರ್ಯದರ್ಶಿ ರೇಷ್ಮಾ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು