Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ದಿ. ಗಂಗಾಧರ ಶೆಟ್ಟಿ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು-ಉಮಾನಾಥ ಕೋಟ್ಯಾನ್

ಮುಲ್ಕಿ: ಜೀವನದಲ್ಲಿ ತಾವು ಮಾಡಿದ ಸತ್ಕರ್ಮಗಳು ಶಾಶ್ವತವಾಗಿ ಉಳಿಯುತ್ತದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು 
ಅವರು ಮುಲ್ಕಿ ಸಮೀಪದ ಕೋಲ್ನಾಡ್ ಸುಂದರಾಮ್ ಶೆಟ್ಟಿ ಸಭಾಭವನದಲ್ಲಿ ಅತಿಕಾರಿ ಬೆಟ್ಟು  ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹಾಗೂ ಮುಲ್ಕಿ ವಿಜಯ ರೈತ ಸೇವಾ ಸಹಕಾರಿ ಸಂಘದ ನಿರ್ದೇಶಕ  ದಿ. ಗಂಗಾಧರ ಶೆಟ್ಟಿ ರವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ ದಿ. ಗಂಗಾಧರ ಶೆಟ್ಟಿ ಅವರು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರತಿಯೊಂದು ಸಂಘ-ಸಂಸ್ಥೆಗಳ ಅಭಿವೃದ್ಧಿಗೆ ಕಾರಾಣೀಭೂತರಾಗಿದ್ದರು,
ದಿ. ಗಂಗಾಧರ ಶೆಟ್ಟಿ ರವರ  ನೆನಪಿಗಾಗಿ ಪಂಚಾಯತ್ ವ್ಯಾಪ್ತಿಯಲ್ಲಿ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದರು
ಪೂನಾ ಬಂಟರ ಸಂಘದ ಮಾಜೀ ಅಧ್ಯಕ್ಷ ಸುಭಾಷ್ ಹೆಗ್ಡೆ ಮಾತನಾಡಿದರು 
ದಿ.ಗಂಗಾಧರ ಶೆಟ್ಟಿ ರವರ ಪುತ್ರ ಆದಿತ್ಯ ಜಿ ಶೆಟ್ಟಿ ಮಾತನಾಡಿ ನಮ್ಮ ಕುಟುಂಬದ ಮೇಲೆ ಪ್ರೀತಿ ವಿಶ್ವಾಸದ ಮೂಲಕ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು 
ಸಭೆಯಲ್ಲಿ ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ  ದೆಪ್ಪುಣಿ ಗುತ್ತು ಸುಧಾಕರ ಶೆಟ್ಟಿ, ಮಂಗಳೂರು ಅಮೋಘ ಶಿಪ್ಪಿಂಗ್ ಕಂಪನಿಯ ನಿತ್ಯಾನಂದ ಶೆಟ್ಟಿ,ಉದ್ಯಮಿ ಅರವಿಂದ ಪೂಂಜಾ ಕಾರ್ನಾಡ್ ರಾಮದಾಸ ಶೆಟ್ಟಿ ಬಾಳಿಕೆ ಮನೆ, ದೇವಾನಂದ ಶೆಟ್ಟಿ ಮಂಗಳೂರು,
 ವಿಜಿತ್ ಟಿ ಶೆಟ್ಟಿ ಪುತ್ತೂರು ಬಾಳಿಕೆ , ಶಿವ ಚಂದ್ರ ಶೆಟ್ಟಿದೆಪ್ಪುಣಿ ಗುತ್ತು ಗುಣೇಶ್ ಶೆಟ್ಟಿ ಕೊಲಕಾಡಿ, ಜನಾನಂದ ಶೆಟ್ಟಿ ತಿಂಗೊಳೆ ಮನೆ, ರಾಮಚಂದ್ರ ನಾಯ್ಕ ಕೋಲ್ನಾಡು ಗುತ್ತು, ವಿದ್ಯಾಧರ ಶೆಟ್ಟಿ, ಕಿರಣ್ ಶೆಟ್ಟಿ ಕೋಲ್ನಾಡು ಗುತ್ತು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಭಾನುಮತಿ ಶೆಟ್ಟಿ ಕಕ್ವಗುತ್ತು ರಂಗನಾಥ ಶೆಟ್ಟಿ,
ದಿವಂಗತ ಗಂಗಾಧರ ಶೆಟ್ಟಿ ರವರ ಪತ್ನಿ ಮಾಲಿನಿ ಜಿ ಶೆಟ್ಟಿ, ಪುತ್ರ ಅರ್ಜುನ್ ಜಿ ಶೆಟ್ಟಿ
ಮತ್ತಿತರರು ಉಪಸ್ಥಿತರಿದ್ದರು 
ಸಭೆಯಲ್ಲಿ ದಿ. ಗಂಗಾಧರ ಶೆಟ್ಟಿ ಯವರ ಆತ್ಮಕ್ಕೆ ಚಿರಶಾಂತಿ ಮೂಲಕ ಮೌನ ಪ್ರಾರ್ಥನೆ ಮೂಲಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು ನಿವೃತ್ತ ಉಪನ್ಯಾಸಕ  ಸಾಯಿನಾಥ ಶೆಟ್ಟಿ ಮುಂಡ್ಕೂರು ನಿರೂಪಿಸಿದರು.