Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದಲ್ಲಿ ನವರಾತ್ರಿ ಮಹೋತ್ಸವ

ಮುಲ್ಕಿ: ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದಲ್ಲಿ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು
ಆದಿತ್ಯವಾರ ಸಂಜೆ ಗಂಟೆ 7.30ಕ್ಕೆ  ಚಿತ್ರಾಪು ಜಯಶ್ರೀ ಬಾಲಚಂದ್ರ ಸನಿಲ್,  ನೀಲಾಧರ ಕೋಟ್ಯಾನ್, ಪ್ರೇಮಾಮೃತ, ಜ್ಯೋತ್ಸ್ನಾ ಮತ್ತು ತಿಲಕ್ ಬಂಗೇರ  ಪ್ರಜ್ವಲ್ ಕುಮಾರ್, ಮಂಜನಾಡಿ,ರವರು ದೀಪ ಪ್ರಜ್ವಲನೆ ಮುಖಾಂತರ ನವರಾತ್ರಿ ಮಹೋತ್ಸವಕ್ಕೆ ಚಾಲನೆ  ನೀಡಿದರು
ಈ ಸಂದರ್ಭ ಭಜನಾಮಂದಿರದ ಅಧ್ಯಕ್ಷ ಲೋಕೇಶ್  ಪಿ ಕೋಟ್ಯಾನ್, ಗೌರವಾಧ್ಯಕ್ಷ ರಮೇಶ್ ಎ ಅಮೀನ್, ಕಾರ್ಯದರ್ಶಿ ಸುಧೀರ್ ಡಿ ಸುವರ್ಣ, ಮಂದಿರದ ಆರ್ಚಕ ಯಾದವ ಶಾಂತಿ ಮತ್ತಿತರರು ಉಪಸ್ಥಿತರಿದ್ದರು 

ನವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭ ಅ 19 ರಂದು ನಡೆಯಲಿದ್ದು ಸಭಾ ಕಾರ್ಯಕ್ರಮ,ಮಧ್ಯಾಹ್ನ  ಮಹಾ ಅನ್ನಸಂತರ್ಪಣೆ ನಡೆಯಲಿದೆ