Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮಿಥುನ್‌ ರೈ ಹುಟ್ಟು ಹಬ್ಬ ಮೂಲ್ಕಿಯಲ್ಲಿ ವಿವಿಧ ಸೇವಾ ಕಾರ್ಯಕ್ರಮ

ಮೂಲ್ಕಿ:ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಮತ್ತು ಯುವ  ಕಾಂಗ್ರೆಸ್‌ ಸಮಿತಿಯ ನೇತ್ರತ್ವದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ,ರಾಜ್ಯ ಯುವ ನಾಯಕ ಮಿಥುನ್ ಎಂ. ರೈ ಯವರ ಹುಟ್ಟುಹಬ್ಬದ ಪ್ರಯುಕ್ತ  ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಶಕ್ತ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು.ಈ ಸಂದರ್ಭ ಮಿಥುನ್‌ ರೈ, ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್‌,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಹನ್‌ ಕೋಟ್ಯಾನ್‌,ಕಾರ್ಯದರ್ಶಿ ಮಂಜುನಾಥ ಕಂಬಾರ,ಯುವ ಕಾಂಗ್ರೆಸ್‌ ಅಧ್ಯಕ್ಷ ರಕ್ಷಿತ್‌ ಪೂಜಾರಿ ,ಮೂಲ್ಕಿ ನಗರ ಪಂಚಾಯತ್‌ ಮಾಜಿ ಸದಸ್ಯ ಪುತ್ತುಬಾವು,ಕಿನ್ನಿಗೋಳಿ ಪಟ್ಟಣ ಪಂಚಾಯತ್‌  ಸದಸ್ಯ ಪ್ರಕಾಶ್‌ ಆಚಾರ್‌, ಪಕ್ಷದ ಪದಾಧಿಕಾರಿಗಳು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.