ಮುಲ್ಕಿ: ತುಳು ಪಜ್ಜೆ ಕಾರ್ಯಕ್ರಮ-ವಿಶ್ವ ತುಳು ಲಿಪಿ ದಿನಾಚರಣೆ
ಮುಲ್ಕಿ:ತುಳುವ ಮಹಾಸಭೆ ಮುಲ್ಕಿ ವಲಯ ಮತ್ತು ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ ಸಹಭಾಗಿತ್ವದಲ್ಲಿ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ತುಳು ಪಜ್ಜೆ ಹಾಗೂ ವಿಶ್ವ ತುಳು ಲಿಪಿ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು
ಡಾ| ವಾಸುದೇವ ಬೆಳ್ಳೆ ಮಾತನಾಡಿ ತುಳು ಭಾಷೆಗೆ ತಮ್ಮದೇ ಆದ ಪ್ರಾಮುಖ್ಯತೆ ಇದೆ, ತುಳು ಲಿಪಿಗೆ ತನ್ನದೇ ಆದ ಪರಂಪರೆ ಇದ್ದು ಅದರ ಅಭಿವೃದ್ಧಿಗೆ ಗಮನ ನೀಡಬೇಕಾಗುತ್ತದೆ ಭಾಷೆ ಮತ್ತು ಆನಂದ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಬೌತಿಕ ಪ್ರಪಂಚ ವಿಸ್ತಾರಕ್ಕೆ ಭಾಷೆ ಮುಖ್ಯವಾಗಿದೆ ಎಂದರು
ಮುಖ್ಯ ಅತಿಥಿಗಳಾಗಿ ತುಳು ವರ್ಲ್ಡ್ ಫೌಂಡೇಶನ್, ಕಟೀಲ್ ನ ಅಧ್ಯಕ್ಷೆ
ಭಾನುಮತಿ ಶೆಟ್ಟಿ ಕಕ್ವಗುತ್ತು, ಮಾತನಾಡಿ ತುಳು ಭಾಷೆಗೆ ಸರಕಾರ ನೀಡಿದ ಮಾನ್ಯತೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕಾಗಿದೆ ತುಳು ಉಳಿಸಿ ಬೆಳೆಸೋಣ ವಿದ್ಯಾರ್ಥಿಗಳು ಒಟ್ಟಾಗಿ ತುಳು ಲಿಪಿಯನ್ನು ಅಧ್ಯಯನ ಮಾಡಿ ಸಾಧನೆ ಮಾಡಬೇಕು ಎಂದರು
ತುಳುವ ಮಹಾಸಭೆ ಮುಲ್ಕಿ ವಲಯ ಅಧ್ಯಕ್ಷ ಉದಯ ಪೂಂಜಾ ತಾರಿಪಾಡಿಗುತ್ತು
ಮಾತನಾಡಿ ಪ್ರತೀ ಶಾಲಾ ಕಾಲೇಜುಗಳಲ್ಲಿ ತುಳು ಲಿಪಿ ಅಧ್ಯಯನದ ವ್ಯವಸ್ಥೆಯಾಗಬೇಕು ಹಾಗೂ ತುಳು ರಾಜ್ಯ ನಿರ್ಮಾಣಕ್ಕೆ ಸರ್ವರ ಸಹಕಾರ ಬೇಕು ಎಂದರು
ವೇದಿಕೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ,ತುಳು ಕಲ್ಬರಲ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ನಿಶ್ಚಿತ್ ರಾಮಕುಂಜ, ,ತುಳು ಲಿಪಿ ನಿರ್ದೇಶಕ ನಿಶಾಂತ್ ರತ್ನಾಕರ್ , ಪಲ್ಲವಿ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ
ಪ್ರಹ್ಲಾದ್ ತಂತ್ರಿ ಬರೆದಿರುವ
"ತುಳು ವರ್ಣಾಮೃತ" ಪುಸ್ತಕ ಹಾಗೂ ತಿಂಗೊಲ್ದ ತುಳು ಪತ್ರಿಕೆ"ಪುಣ್ಣಮೆದ ಬೊಲ್ಪು"
ಬಿಡುಗಡೆ ಮಾಡಲಾಯಿತು
ತುಳುಕಲ್ಚರಲ್ ರಿಸರ್ಚ್ ಫೌಂಡೇಶನ್ ಸ್ಥಾಪಕರಾದ ಮಹಿ ಮುಲ್ಕಿ ರವರಿಂದ
"ಅರುಣಾಬ್ಬನ ಭಾರತ ಕಾವ್ಯದ ಪೊರ್ಲು" ಬಗ್ಗೆ ಉಪನ್ಯಾಸ ನಡೆಯಿತು
ತುಳು ಭಾಷೆ ಅಧಿಕೃತ ಸ್ಥಾನಮಾನ. ನನ ದುಂಬುದ ಪಜ್ಜೆಲು ಬಗ್ಗೆ ನಮ್ಮ ತುಳುನಾಡು ಟ್ರಸ್ಟ್ ನ ಸ್ಥಾಪಕಾಧ್ಯಕ್ಷ
ಜಿ.ವಿ.ಎಸ್ ಉಳ್ಳಾಲ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು
ಮಹಿ ಮುಲ್ಕಿ ಸ್ವಾಗತಿಸಿ ನಿರೂಪಿಸಿದರು.