Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಪ್ರತಿಯೊಬ್ಬ ತಾಯಿ ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಪಾಲನೆ ಪೋಷಣೆಗೆ ಜಾಗೃತಿ ಅವಶ್ಯ -ಭಾನುಮತಿ ಶೆಟ್ಟಿ ಕಕ್ವಗುತ್ತು

ಮುಲ್ಕಿ: ರೋಟರಿ ಕ್ಲಬ್ ವತಿಯಿಂದ ಅತಿಕಾರಿ ಬೆಟ್ಟು  ಗ್ರಾಮ ಪಂಚಾಯತ್ ವ್ಯಾಪ್ತಿಯ ಕಕ್ವ ಅಂಗನವಾಡಿಯಲ್ಲಿ ತಾಯಿಯ ಆರೋಗ್ಯ ಮತ್ತು ಶಿಶುಪಾಲನ ಜಾಗೃತ ಶಿಬಿರ ನಡೆಯಿತು
ಕಾರ್ಯಕ್ರಮವನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ತಾಯಿ ತಮ್ಮ ಆರೋಗ್ಯದ ಜೊತೆಗೆ ಮಕ್ಕಳ ಪಾಲನೆ ಪೋಷಣೆಗೆ ಜಾಗೃತಿ ವಹಿಸಬೇಕು. ಎಳವೆಯಲ್ಲಿ  ಮಕ್ಕಳ ಬೆಳವಣಿಗೆ ಜೊತೆಗೆ ಉತ್ತಮ ಸಂಸ್ಕೃತಿ ಹಾಗೂ ಸಂಸ್ಕಾರ ನೀಡಿದರೆ ಸಭ್ಯ ಭಾರತ ಪ್ರಜೆಯಾಗಲು ಸಾಧ್ಯ ಎಂದರು 
ಮುಖ್ಯ ಅತಿಥಿಗಳಾಗಿ ಕೆಮ್ರಾಲ್ ಅರೋಗ್ಯ ಕೇಂದ್ರದ  ನಂದೀಶ್ ರವರು ಮಾಹಿತಿ ನೀಡಿದರು
ಈ ಸಂದರ್ಭ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಜಾ ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್,
ಮುಲ್ಕಿ ರೋಟರಿ ಕ್ಲಬ್ ನ ಭುಜಂಗ  ಕವತ್ತಾರು, ಅಶೋಕ್ ಕುಮಾರ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು