Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಕೀರ್ತಿ ಶೇಷ ಗಂಗಾಧರ ಶೆಟ್ಟಿ ರವರಿಗೆ ಭಾವಪೂರ್ಣ ನುಡಿ ನಮನ

ಮುಲ್ಕಿ:ಕೀರ್ತಿ ಶೇಷ ಗಂಗಾಧರ ಶೆಟ್ಟಿ ಅವರ ನುಡಿ ನಮನ ಕಾರ್ಯಕ್ರಮ ಗುರುವಾರ  ಅತಿಕಾರಿಬೆಟ್ಟು ಕುಂಜಾರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ  ನಡೆಯಿತು
ಸಭೆಯಲ್ಲಿ ಕ್ಷೇತ್ರದ ಅರ್ಚಕರಾದ ವೇದಮೂರ್ತಿ ಶ್ರೀಕಾಂತ್ ಭಟ್ ಕೊಲಕಾಡಿ ರವರು ದಿ.  ಗಂಗಾಧರ ಶೆಟ್ಟಿ ಭಾವಚಿತ್ರಕ್ಕೆ ನುಡಿ ನಮನ ಸಲ್ಲಿಸಿ ಮಾತನಾಡಿ ಕ್ರಿಯಾಶೀಲ ವ್ಯಕ್ತಿತ್ವದವರಾದ  ದಿ ಗಂಗಾಧರ ಶೆಟ್ಟಿಯವರು ಎಲ್ಲರ ಪ್ರೀತಿ ಪಾತ್ರರಾಗಿದ್ದರು ದೇವಸ್ಥಾನದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರು.ಎಂದರು
ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ಗುತ್ತಿನಾರ್ ಸುಧಾಕರ ಶೆಟ್ಟಿ ನುಡಿ ನಮನ ಸಲ್ಲಿಸಿ ಮಾತನಾಡಿ ದಿ.ಗಂಗಾಧರ ಶೆಟ್ಟಿ ಯವರು ದೈವಸ್ಥಾನದ ಅಭಿವೃದ್ಧಿಯಲ್ಲಿ  ದೊಡ್ಡ ಆಧಾರ ಸ್ತಂಭವಾಗಿ , ಪ್ರತಿಯೊಂದು ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು 
ಮಂಗಳೂರಿನ ಅಮೋಘ ಶಿಪ್ಪಿಂಗ್ ಕಂಪನಿಯ ನಿತ್ಯಾನಂದ ಶೆಟ್ಟಿ, ನುಡಿ ನಮನ ಸಲ್ಲಿಸಿ ಮಾತನಾಡಿ
ದಿ.ಗಂಗಾಧರ ಶೆಟ್ಟಿ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಅವರು ಅಜಾತಶತ್ರು ಎಂದು ಬಣ್ಣಿಸಿದರು 
ಜಿಲ್ಲಾ ಸದ್ಭಾವನ ಸಮಿತಿ ಸದಸ್ಯ ನಿವೃತ್ತ ಉಪನ್ಯಾಸಕ ವೈಎನ್ ಸಾಲ್ಯಾನ್ ಮಾತನಾಡಿ ದಿ ಗಂಗಾಧರ ಶೆಟ್ಟಿಯವರು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು 
ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ರಾಷ್ಟ್ರಸೇವೆ(ಸದ್ಭಾವ) ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದರು ಅವರ ಆದರ್ಶಗಳನ್ನು ಯುವ ಜನಾಂಗ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು
ಕೊಲಕಾಡಿ ಕೆಪಿಎಸ್‌ಕೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ನಾಗಭೂಷಣ್ ರಾವ್,
ಶಿಮಂತೂರು ಅವಧೂತ ಭಗವಾನ್ ನಿತ್ಯಾನಂದ ಮಂದಿರದ ಆಡಳಿತ ಸಮಿತಿಯ ವಿಜಯಕುಮಾರ್ ಕೊಡಿಯಾಲಬೈಲು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ  ವಿಜಯ ರೈತ ಸೊಸೈಟಿ ನಿರ್ದೇಶಕ ರಾಜೇಶ್ ಶೆಟ್ಟಿ ಉಳೆಪಾಡಿ,, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜೀ ಅಧ್ಯಕ್ಷ ಗೋಪಿನಾಥ ಪಡಂಗ, ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಕಿಶೋರ್,, ಕಕ್ವ ಶ್ರೀ ಕೋರ್ದಬ್ಬು ದೈವಸ್ಥಾನದ ಆಡಳಿತ ಸಮಿತಿಯ ಗೋಪಾಲ ಮತ್ತಿತರರು ಮಾತನಾಡಿದರು 
ನುಡಿನಮನ ಕಾರ್ಯಕ್ರಮದಲ್ಲಿ  ವಿಜಿತ್ ಟಿ ಶೆಟ್ಟಿ,ಉದ್ಯಮಿ ಗುಣೇಶ್ ಶೆಟ್ಟಿ ಕೊಲಕಾಡಿ, ಜನಾನಂದ ಶೆಟ್ಟಿ ತಿಂಗೊಳೆ ಮನೆ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ರಂಗನಾಥ ಶೆಟ್ಟಿ, ದಿನೇಶ್ ಶೆಟ್ಟಿ ಬಳ್ಕುಂಜೆ, ಮತ್ತಿತರರು ಉಪಸ್ಥಿತರಿದ್ದರು 
ಅತಿಕಾರಿಬೆಟ್ಟು  ಗ್ರಾಮ ಪಂಚಾಯತ್ ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್  ನಿರೂಪಿಸಿದರು
 ಬಳಿಕ  ಅತಿಕಾರಿಬೆಟ್ಟು ಕುಂಜಾರಗಿರಿ ಶ್ರೀ ಮಹಾಲಿಂಗೇಶ್ವರ
ಕ್ಷೇತ್ರದ ಆಡಳಿತ ಮಂಡಳಿ, ಮಹಿಳಾ ಮಂಡಳಿ ಮತ್ತು ಯುವಕ ಸಂಘ ,, ನಡಿಬೆಟ್ಟು ಧೂಮಾವತಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಹಳೆ ವಿದ್ಯಾರ್ಥಿ ಸಂಘ ಕೆಪಿಎಸ್‌ಕೆ ಸ್ಮಾರಕ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪಂಜಿನಡ್ಕ. ಆಡಳಿತ ಮಂಡಳಿ ಮತ್ತು ವಿಜಯ ರೈತ ಸೇವಾ ಸಹಕಾರಿ ಸಂಘ. ವ್ಯವಸ್ಥಾಪಕ ಸಮಿತಿ ಹಾಗೂ ಸರ್ವ ಸದಸ್ಯರು ಮತ್ತು ಕಕ್ವ ಕೊಲಕಾಡಿ ಕೊರ್ದಬ್ಬು ಧೂಮಾವತಿ ದೈವಸ್ಥಾನ, ಹಾಗೂ ಮೂಲ್ಕಿ ಮೂಡಬಿದ್ರಿ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಮಂಡಲ.,ಶಿಮಂತೂರು ಅವಧೂತ ಭಗವಾನ್ ನಿತ್ಯಾನಂದ ಮಂದಿರ . ಜಿಲ್ಲಾ ಸದ್ಭಾವನ ಸಮಿತಿಯ ಸದಸ್ಯರು ಮಂಗಳೂರು (ಗ್ರಾ)., ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ,, ಮೂಲ್ಕಿ ಬಂಟರ ಸಂಘ, ಚಾಮುಂಡಿ ಸಪರಿವಾರ ದೈವಸ್ಥಾನ ಟ್ರಸ್ಟ್ ಕೊಲಕಾಡಿ ಮತ್ತು ಗಂಗಾಧರ ಶೆಟ್ಟಿ ಅವರ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ದಿವಂಗತ ಗಂಗಾಧರ ಶೆಟ್ಟಿ ರವರ  ಭಾವಚಿತ್ರಕ್ಕೆ ಪುಷ್ಪ ನಮನ  ಮೂಲಕ ಭಾವಪೂರ್ಣ ಶ್ರದ್ಧಾಂಜಲಿ  ಅರ್ಪಿಸಲಾಯಿತು