Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸೇವಾ ಸಂಸ್ಥೆಗಳ ಸಹಕಾರ ಅಪಾರ-ಕಾಮೇಶ್ವರಿ ವಿಷ್ಣುಮೂರ್ತಿ ಭಟ್

ಮುಲ್ಕಿ: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಸೇವಾ ಸಂಸ್ಥೆಗಳ ಸಹಕಾರ ಅಪಾರ ಎಂದು ಶಿಕ್ಷಕಿ  ಕಾಮೇಶ್ವರಿ ವಿಷ್ಣುಮೂರ್ತಿ ಭಟ್ ಹೇಳಿದರು
ಅವರು ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ನೂತನ ಸಭಾಂಗಣದ ಬಳಿಯಲ್ಲಿ ಯುವಕ ಮಂಡಲ ಶಿಮಂತೂರು  ವತಿಯಿಂದ ಸುಮಾರು 65, 000ರೂ ವೆಚ್ಚದಲ್ಲಿ ಅಳವಡಿಸಿದ
ಶುದ್ಧ ಕುಡಿಯುವ ಘಟಕವನ್ನು ಉದ್ಘಾಟಿಸಿ ಮಾತನಾಡಿದರು
 ಕ್ಷೇತ್ರದ ಪ್ರಧಾನ ಅರ್ಚಕರಾದ ಪುರುಷೋತ್ತಮ್ ಭಟ್ ಮಾತನಾಡಿದರು
ಈ ಸಂದರ್ಭ  ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ಯುವಕ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು