ಬಪ್ಪನಾಡು: ಸಾಮೂಹಿಕ ಯೋಗ ದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಕಾರ್ಯಕ್ರಮ
ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶ್ರೀ ಕ್ಷೇತ್ರ ಬಪ್ಪನಾಡು ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಎಸ್. ಪಿ. ವೈ. ಎಸ್. ಎಸ್. ಯೋಗ ಸಮಿತಿಯಿಂದ ನವರಾತ್ರಿ ಪ್ರಯುಕ್ತ ಭಾನುವಾರ ಸಾಮೂಹಿಕ ಯೋಗದುರ್ಗಾ ನಮಸ್ಕಾರ ಹಾಗೂ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಪುಷ್ಪಾರ್ಚನೆ ಕಾರ್ಯಕ್ರಮ ನಡೆಯಿತು
ದೇವಸ್ಥಾನದ ಅರ್ಚಕ ಶ್ರೀಪತಿ ಉಪಾಧ್ಯಾಯ , ದೇವಸ್ಥಾನದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಆಳ್ವ ,,ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕ ನಾರಾಯಣ ,ಪ್ರಾಂತ್ಯ ಸಂಚಾಲಕ ಲಕ್ಷ್ಮೀನಾರಾಯಣ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೋಗ ದುರ್ಗಾನಮಸ್ಕಾರ ಹಾಗೂ ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣದ ಮಹತ್ವವನ್ನು ಶಿಕ್ಷಕರಾದ ಪೂರ್ಣಿಮಾ ಪುತ್ತೂರುರವರು ತಿಳಿಸಿದರು.ಯೋಗದುರ್ಗಾನಮಸ್ಕಾರವನ್ನು ಶ್ರೀಕಲಾ ನಡೆಸಿಕೊಟ್ಟರು.
ಪ್ರಾಂತ ಸಂಚಾಲಕರು ಸಂಘಟನಾ ವಿಭಾಗದ ಹರೀಶ್ ಕೋಟ್ಯಾನ್ , ಪ್ರಾಂತ ಪ್ರತಿನಿಧಿ ಶಿವಾನಂದ ರೈ, ವಲಯ ಸಂಯೋಜಕರಾದ ಜಯರಾಮ ಉಳ್ಳಾಲ, ವಲಯ ಸಂಚಾಲಕ ಅಶೋಕ ಕುಮಾರ್ ಜೈನ್ ಮಾರ್ಗದರ್ಶನ ನೀಡಿದರು.
ವಲಯ ಚಿಂತನ ಕೂಟ ಹಾಗೂ ಪ್ರಶಿಕ್ಷಣ ಪ್ರಮುಖರಾದ ಪ್ರತಾಪ್ ರಾವ್ , ಜಿಲ್ಲಾ ಸಹ ಸಂಚಾಲಕರಾದ ಲೋಕೇಶ್ ಪೊಳಲಿ, ಅನಿತಾ, ಜಿಲ್ಲಾ ಸಂಘಟನಾ ಪ್ರಮುಖರಾದ ಶಿವಪ್ರಸಾದ್ ಪೊಳಲಿ, ಜಿಲ್ಲಾ ಲೆಕ್ಕ ಪತ್ರ ಪ್ರಮುಖರು ಸುಬ್ರಹ್ಮಣ್ಯ ಭಟ್ , ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಮುಖರಾದ ಅನುಪಮಾ, ಜಿಲ್ಲಾ ಮಾತೃ ಭೋಜನ ಪ್ರಮುಖರಾದ ಶೋಭ ಸುರತ್ಕಲ್, ಜಿಲ್ಲಾ ಪ್ರಶಿಕ್ಷಣ ಹಾಗೂ ಚಿಂತನ ಕೂಟ ಪ್ರಮುಖರಾದ ಹರೀಶ್ ಅಂಚನ್, ಗುರುರಾಜ್ ಶೆಟ್ಟಿ ಕಂಕನಾಡಿ , ಸುಂದರ ಉಳ್ಳಾಲ, ಜನಾರ್ದನ ಪೊಳಲಿ, ಶ್ರೀನಿವಾಸ ಕಾವೂರು, ಶ್ಯಾಮಲಾ ಸುರತ್ಕಲ್, ಕೃಷ್ಣಾನಂದ ಪುತ್ತೂರು, ನಗರ ಪ್ರಮುಖರಾದ ದೇವದಾಸ್,ಕವಿತಾ, ಶೇಖರ ದೇವಾಡಿಗ ,ಸುಮನಾ, ರಾಘವೇಂದ್ರ ಶೆಟ್ಟಿ ತಡಂಬೈಲ್, ಅಶೋಕ ಕೃಷ್ಣಾಪುರ,ಭರತ್ ಶೆಟ್ಟಿ ಕುಳಾಯಿ, ರೋಹಿಣೇಶ್, ವರ್ಷ ಮುಲ್ಕಿ ಹಾಗೂ ಇತರೆ ಜವಾಬ್ದಾರಿ ವಹಿಸಿರುವ ಎಲ್ಲಾ ಪ್ರಮುಖರುಗಳು ಭಾಗವಹಿಸಿದ್ದರು.
ಭಾನುವಾರ ಮುಂಜಾನೆ 4:30 ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ 3 ಹಂತಗಳಲ್ಲಿ 9 ಸುತ್ತು ಯೋಗದುರ್ಗಾ ನಮಸ್ಕಾರ, ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಹಾಗೂ ಪುಷ್ಪಾರ್ಚನೆಯೊಂದಿಗೆ ಬೆಳಗ್ಗೆ 7:30 ಗಂಟೆಗೆ ಸಮಾಪನಗೊಂಡಿತು.
ಪೊಳಲಿ ಹಾಗೂ ಉಳ್ಳಾಲ ನಗರದ ಮಹಿಳಾ ಪ್ರಮುಖರು ಮಹಾಲಕ್ಷ್ಮ್ಯಷ್ಟಕಂ ಸ್ತೋತ್ರ ಪಠಣ ಮಾಡಿಸಿದರು. ಶ್ವೇತಾ ನಿರೂಪಣೆ ಮಾಡಿದರು. ರಾಜೇಶ್ ಸುರತ್ಕಲ್ ಧನ್ಯವಾದ ಅರ್ಪಿಸಿದರು