Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಲಯನ್ಸ್ ಕ್ಲಬ್ ಹಾಗೂ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ ಕಾರ್ನಾಡ್ ಸರಕಾರಿ ಪದವಿಪೂರ್ವ ಕಾಲೆಜು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಹಾಗೂ ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ

ಮುಲ್ಕಿ:ಲಯನ್ಸ್ ಕ್ಲಬ್  ಹಾಗೂ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ ಕಾರ್ನಾಡ್  ಸರಕಾರಿ ಪದವಿಪೂರ್ವ ಕಾಲೆಜು ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧ ಹಾಗೂ  ಮಾದಕ ವ್ಯಸನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು   ಕಾಲೇಜು ಪ್ರಾಂಶುಪಾಲ ವಾಸುದೇವ ಬೆಳ್ಳೆ ಮಾತನಾಡಿ ವಿದ್ಯಾರ್ಥಿಗಳು ನಿಮ್ಮ ಕೈಯಲ್ಲಿರುವ ಮೊಬೈಲ್  ಹಾಗೂ ಸಾಮಾಜಿಕ ಜಾಲತಾಣಗಳು  ಜ್ಞಾನವನ್ನು ಹೆಚ್ಚಿಸುವ ಸಾಧನವಾಗಬೇಕು ಹೊರತು ಜೀವನವನ್ನು ಹಾಳು ಮಾಡುವ ಸಾಧನವಾಗಬಾರದು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಹಿಸಿದ್ದರು.  ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ರೇವಣ್ಣ ರವರು ಮಾತನಾಡಿ ಸೈಬರ್ ಅಪರಾಧಗಳ ಬಗ್ಗೆ ಎಚ್ಚರವಾಗಿರಿ. ಮಾದಕ ವ್ಯಸನಗಳಿಂದ ದೂರವಿರಿ.  ಪೋಷಕರಿಗೆ ಹೆಮ್ಮೆ ತರುವ ಮಕ್ಕಳಾಗಿ ಬೆಳೆದು ದೇಶದ ಹೆಮ್ಮೆಯ ಪ್ರಜೆಗಳಾಗಿ ಎಂದರು.
 ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ  ಹರ್ಷರಾಜ್ ಶೆಟ್ಟಿ ಜಿ. ಎಮ್, ನಿರೂಪಮ ಶೆಟ್ಟಿ,ಶಿಕ್ಷಕಿ ಲಿಡಿಯ ಲೋನಾ ಬ್ರಾಗ್ಸ್ ಉಪಸ್ಥಿತರಿದ್ದರು.
 ಉದಯ ಅಮೀನ್ ಕಾರ್ಯಕ್ರಮ ನಿರೂಪಿಸಿದರು.