Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಅಂತರಾಷ್ಟ್ರೀಯ ವಾಸ್ತು ತಜ್ಞ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನ್ಮ ದಿನಾಚರಣೆ, ಹುಟ್ಟೂರಿನಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮೂಲಕ ಅನೇಕ ಸೇವಾ ಕಾರ್ಯಕ್ರಮಗಳು

ಮುಲ್ಕಿ: ಅಂತರಾಷ್ಟ್ರೀಯ ವಾಸ್ತು ತಜ್ಞ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಜನ್ಮ ದಿನಾಚರಣೆ ಅವರ ಹುಟ್ಟೂರಿನಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮೂಲಕ ಅನೇಕ ಸೇವಾ ಕಾರ್ಯಕ್ರಮಗಳು ನಡೆಯಿತು.
ಶ್ರೀ ಚಂದ್ರಶೇಖರ ಸ್ವಾಮೀಜಿ ಯವರು ಕುಟುಂಬ ಸಮೇತರಾಗಿ ತಮ್ಮ ಆರಾಧ್ಯ ಕ್ಷೇತ್ರ ತಿರುಪತಿ ಶ್ರೀ ವೆಂಕಟೇಶ್ವರ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಯುಎಇ, ಅರಬ್ ದೇಶದಲ್ಲಿ ನಡೆಯುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸ್ವಾಮೀಜಿ ಅವರ ಬೆಂಗಳೂರು ಮತ್ತು ಮೂಲ್ಕಿಯ ಆಶ್ರಮದ ಮೂಲಕ ವಿವಿಧ ಸಾಮಾಜಿಕ ಕಾರ್ಯ ನಡೆದವು. ಸ್ವಾಮೀಜಿ ಅವರ ಹುಟ್ಟುಹಬ್ಬವನ್ನು ವಿವಿಧ ಸಾಮಾಜಿಕ ಚಟುವಟಿಕೆಯೊಂದಿಗೆ ಆಚರಿಸುವ ಉದ್ದೇಶದಿಂದ ಅವರ ಭಕ್ತರು ಹಾಗೂ ಅಭಿಮಾನಿಗಳು  ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಒಳ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿದರು.
ಹಾಗೂ ಮೂಲ್ಕಿ ಸಿಎಸ್ಐ ಬಾಲಿಕಾಶ್ರಮಕ್ಕೆ ಬಟ್ಟೆ ಒಗೆಯುವ ಯಂತ್ರ (ವಾಷಿಂಗ್ ಮಷೀನ್) ನೀಡಲಾಯಿತು
ಬೆಂಗಳೂರಿನ ವಿಶೇಷ ಚೇತನ ಮಕ್ಕಳ ಶಾಲೆ ಹಾಗೂ ವೃದ್ಧಾಶ್ರಮಕ್ಕೆ,  ಶ್ರಮಿಕರು, ದುರ್ಬಲ ವರ್ಗ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ನೆರವು, ,
ನಿರಂತರ ಧಾರ್ಮಿಕ ಕಾರ್ಯಕ್ರಮದೊಂದಿಗೆ ಬಡವರ್ಗದವರಿಗೆ ಉಚಿತ ಕೊಡುಗೆ ನೀಡಲಾಯಿತು.
ಉಡುಪಿಯಲ್ಲಿ  ಆಶ್ರಮದ ಸೇವಾ ಭಕ್ತರಾದ ಸಾಧಿಕ್ ಅಹಮದ್ ರವರು  ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು 
ಸಾಮಾಜಿಕ ಕಾರ್ಯಕರ್ತ ಆಶ್ರಮದ ಸೇವಾ ಭಕ್ತರಾದ
ಶರತ್ ಕಾರ್ನಾಡ್,ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜೀ ಅಧ್ಯಕ್ಷ ಪ್ರಕಾಶ್ ಸುವರ್ಣ, ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್, ಪತ್ರಕರ್ತರಾದ ಹರೀಶ್ ಹೆಜ್ಮಾಡಿ , ಜೈ ತುಳುನಾಡ್ ಸಂಘಟನೆಯ ಉದಯ ಪೂಂಜ, ದಿನೇಶ್ ಶೆಟ್ಟಿ ಬೆಳ್ತಂಗಡಿ,ಪತ್ರಕರ್ತರಾದ ಗಣೇಶ್ ಪಂಜ ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ವಕ್ತಾರ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.