Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಬಪ್ಪನಾಡು ದೇವಸ್ಥಾನದ ನೂತನ ಕ್ಷೇತ್ರಪಾಲ ಗುಡಿಯ ನಿರ್ಮಾಣಕ್ಕೆ ಚಾಲನೆ

ಮುಲ್ಕಿ:ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ನೂತನ ಕ್ಷೇತ್ರಪಾಲ ಗುಡಿಯ ನಿರ್ಮಾಣಕ್ಕೆ ದಾನಿಗಳು ಮತ್ತು ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಯದುನಾರಾಯಣ ಶೆಟ್ಟಿಯವರಿಗೆ ಮತ್ತು ಶಿಲ್ಪಿಗಳಿಗೆ  ಶ್ರೀ ದೇವರ ಪ್ರಸಾದ ನೀಡುವ ಮೂಲಕ ಚಾಲನೆ ನೀಡಲಾಯಿತು.
 ಅರ್ಚಕ ಗೋಪಾಲಕೃಷ್ಣ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಮಾತನಾಡಿದ ಯದುನಾರಾಯಣ ಶೆಟ್ಟಿಯವರು
ಧಾರ್ಮಿಕ ಕ್ಷೇತ್ರಗಳು ಅಭಿವೃದ್ದಿ ಕಾಣಬೇಕಾದರೆ ಭಕ್ತರ ಸಹಕಾರ ಅಗತ್ಯ, ಬಪ್ಪನಾಡು ದೇವಳದ ಸಮಗ್ರ ಜೀರ್ಣೋದ್ದಾರಕ್ಕಾಗಿ ಚಾಲನೆ ದೊರಕಿದ್ದು ಅನೇಕ ಅಭಿವೃದ್ದಿ ಕಾರ್ಯಗಳು ನಡೆಯಲಿದೆ, ಅಭಿವೃದ್ದಿ ಕೆಲಸಕ್ಕೆ ಮರದ ಅಗತ್ಯವಿದ್ದು ಭಕ್ತಾಧಿಗಳು ಸಹಕಾರ ನೀಡಬೇಕು ಎಂದರು.
ಈ ಸಂದರ್ಭ ಅರ್ಚಕ ಪ್ರಸಾದ್ ಭಟ್, ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸರು,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯದು ನಾರಾಯಣ ಶೆಟ್ಟಿ ಕ್ಷೇತ್ರದ ಕಾರ್ಯನಿರ್ವಣಾಧಿಕಾರಿ ಶ್ವೇತಾ ಪಳ್ಳಿ, ಸಮಿತಿ ಕಾರ್ಯಾಧ್ಯಕ್ಷರಾದ ಅತುಲ್ ಕುಡ್ವ ಸುನಿಲ್ ಆಳ್ವ, ಸದಸ್ಯರಾದ
ರಾಮಚಂದ್ರ ನಾಯ್ಕ, ಕೋಲ್ನಾಡು ಗುತ್ತು  ಸಂಜೀವ ದೇವಾಡಿಗ
ಉದ್ಯಮಿ ಕಿರಣ್ ಕುಮಾರ್ ಶೆಟ್ಟಿ ಕೋಲ್ನಾಡುಗುತ್ತು, ಸುಜಿತ್ ಅಳ್ವ ಆದ್ಯಪಾಡಿ ಕೊಲ್ನಾಡುಗುತ್ತು,   ವಿದ್ಯಾಧರ್ ಶೆಟ್ಟಿ ಕೊಲ್ನಾಡುಗುತ್ತು,  
ವಿಶ್ವನಾಥ ಗೇರುಕಟ್ಟೆ,
ಚರಣ್ ಶೆಟ್ಟಿ ಕಡವಿನಬಾಗಿಲು, ಉದಯಕುಮಾರ್ ಶೆಟ್ಟಿ ಅಧಿದನ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ನಾಗರಾಜ್ ಬಪ್ಪನಾಡು, ದಿನೇಶ್ ಸುವರ್ಣ ಬೆಳ್ಳಾಯರು, ಪ್ರಮೋದ್ ಶೆಟ್ಟಿ, ನಾಗೇಶ್ ಬಪ್ಪನಾಡು, ಶಿವಶಂಕರ್ ವರ್ಮ, ಶಿಲ್ಪಿ ಸುಬ್ರಮಣ್ಯ ಮತ್ತಿತರರು ಉಪಸ್ಥಿತರಿದ್ದರು