ಶರನ್ನವರಾತ್ರಿ ಪ್ರಯುಕ್ತ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಪ್ರಪ್ರಥಮ ಬಾರಿಗೆ ನಡೆದ ದಾಂಡಿಯಾ ನೃತ್ಯ
ಮೂಲ್ಕಿ:ನವರಾತ್ರಿಯಲ್ಲಿ ಶಾರದಾಮಾತೆಯ ಆರಾಧನೆಯು ಕಲಾರಾಧನೆಯ ಮೂಲಕ ನಡೆಯುತ್ತಿದ್ದು ಯುವ ಜನತೆ ಸಂಸ್ಕೃತಿ ಸಂಸ್ಕಾರಗಳ ಬಗ್ಗೆ ತಿಳುವಳಿಕೆ ಹೊಂದಿ ಸಮಾಜದ ಅಭಿವೃದ್ಧಿಯಲ್ಲಿ ಸಹಕಾರ ನೀಡಬೇಕು ಎಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಡಾ. ರಾಜಶೇಖರ ಕೋಟ್ಯಾನ್ ಹೇಳಿದರು. ಶರನ್ನವರಾತ್ರಿ ಪ್ರಯುಕ್ತ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಪ್ರಪ್ರಥಮ ಬಾರಿಗೆ ನಡೆದ ದಾಂಡಿಯಾ ನೃತ್ಯವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಚಂದ್ರಶೇಖರ ಸುವರ್ಣ,ಉಪಾಧ್ಯಕ್ಷ ಸತೀಶ್ ಅಂಚನ್
ಕಾರ್ಯದರ್ಶಿ ಯತೀಶ್ ಅಂಚನ್, ಕೋಶಾಧಿಕಾರಿ ಹರೀಂದ್ರ ಸುವರ್ಣ, ಸೇವಾದಳದ ಅಧ್ಯಕ್ಷ ಗಿರಿಧರ ಅಮೀನ್, ಮಹಿಳಾ ಮಂಡಲದ ಅಧ್ಯಕ್ಷೆ ಸೌಮ್ಯಾ ಕೋಟ್ಯಾನ್, ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಅಧ್ಯಕ್ಷ ಉಮೇಶ್ ಮಾನಂಪಾಡಿ, ಯುವವಾಹಿನಿ ಮೂಲ್ಕಿ ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್, ಸಂಘದ ಪದಾಧಿಕಾರಿಗಳು, ಪೂರ್ವಾಧ್ಯಕ್ಷರು, ಆಡಳಿತ ಸಮಿತಿ ಸದಸ್ಯರು ಮತ್ತು ಸಾರ್ವಜನಿಕರು ಭಾಗವಹಿಸಿದರು. ನರೇಂದ್ರ ಕೆರೆಕಾಡು ನಿರೂಪಿಸಿದರು.