ಅತಿಕಾರಿಬೆಟ್ಟು ನಡಿಬೆಟ್ಟು ಸಾನದ ಮನೆ ನಿವಾಸಿ ಅರ್ಚಕ ಶೇಖರ್ ಕೋಟ್ಯಾನ್ ನಿಧನ
ಮುಲ್ಕಿ: ಅತಿಕಾರಿಬೆಟ್ಟು ನಡಿಬೆಟ್ಟು ಸಾನದ ಮನೆ ನಿವಾಸಿ ಅರ್ಚಕ ಶೇಖರ್ ಕೋಟ್ಯಾನ್ (78) ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು
ಅವರು ಪತ್ನಿ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
ಅವರು ಕಳೆದ 27 ವರ್ಷಗಳಿಂದ ಇತಿಹಾಸ ಪ್ರಸಿದ್ಧ ಅತಿಕಾರಿಬೆಟ್ಟು ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಅರ್ಚಕರಾಗಿ ನಿಷ್ಠಾವಂತ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು
ಹಿರಿಯ ಕೃಷಿಕರಾಗಿ ಪರೋಪಕಾರಿಯಾಗಿ ಜನಾನುರಾಗಿಯಾಗಿದ್ದರು.
ಅವರ ನಿಧನಕ್ಕೆ ಬೆಂಗಳೂರಿನ ಆಧ್ಯಾತ್ಮಿಕಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ, ವೇದ ಮೂರ್ತಿ ಸುಬ್ರಹ್ಮಣ್ಯ ಭಟ್ ದೇoದಡ್ಕ,ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು, ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್,ಅತಿಕಾರಿಬೆಟ್ಟು ಗ್ರಾ.ಪಂ. ಮಾಜೀ ಅಧ್ಯಕ್ಷ ಮನೋಹರ ಕೋಟ್ಯಾನ್,
ನಡಿಬೆಟ್ಟು ಶ್ರೀ ಧೂಮಾವತಿ ದೈವಸ್ಥಾನದ ಆಡಳಿತ ಮೊಕ್ತೇಸರ ದೆಪ್ಪುಣಿಗುತ್ತು ಸುಧಾಕರ ಶೆಟ್ಟಿ, ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಜಗದೀಶ್ ಪ್ರಭು ಪನಿಕೆರೆ, ಅಧ್ಯಕ್ಷರಾದ ಶಿವ ಚಂದ್ರ ಶೆಟ್ಟಿ, ಮುಂಬೈ ಸಮಿತಿಯ ವಿಜಿತ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ಜನಾನಂದ ಶೆಟ್ಟಿ ತಿಂಗೊಳೆ ಮನೆ, ಗಂಗಾಧರ ಶೆಟ್ಟಿ ಬರ್ಕೆ ತೋಟ, ರಾಮದಾಸ್ ಶೆಟ್ಟಿ ಬಾಳಿಕೆ ಮನೆ, ರಂಗನಾಥ ಶೆಟ್ಟಿ, ವಿವೇಕ್ ಶೆಟ್ಟಿ ಬಟಾರ ಬಾಳಿಕೆ ಮನೆ, ಧರ್ಮ ಪಾಲ ಶೆಟ್ಟಿ ಮೂಡುಮನೆ, ಸುಧೀರ್ ಶೆಟ್ಟಿ ನಾಲದ ಮನೆ, ನಯೆಶ್ ಶೆಟ್ಟಿ ಚೌಟರಮನೆ, ಸದಾಶಿವ ಶೆಟ್ಟಿ ಕಬೆತ್ತಿಗುತ್ತು, ರವಿ ಶೆಟ್ಟಿ ತಿಮಿರಿಗುತ್ತು, ಜಯ ಶೆಟ್ಟಿ ಕೋಡಂಗೆ ಮನೆ, ಭೋಜರಾಜ ಶೆಟ್ಟಿ ಎಲ್ಲದಡಿ, ದೇವದಾಸ ಕೋಟ್ಯಾನ್ ಸಾನದ ಮನೆ, ವಸಂತ ಟಿ ಅಮೀನ್ ನಡಿಕೊಪ್ಪಲ, ವಿಜಯಕುಮಾರ್ ಶೆಟ್ಟಿ ಮೈಲೊಟ್ಟು, ಉತ್ತಮ್ ಪೂಜಾರಿ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು , ಭಾನುಮತಿ ಶೆಟ್ಟಿ ಕಕ್ವಗುತ್ತು,ಮತ್ತು ಗ್ರಾಮಸ್ಥರು ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ