Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿಟೂರಿಸ್ಟ್ ಕಾರು ಮತ್ತು ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾರಾಯಣ ನ್ಯಾಕ್ ಆಯ್ಕೆ ,ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದನೆ

ಮುಲ್ಕಿ:ಟೂರಿಸ್ಟ್ ಕಾರು ಮತ್ತು ಟೆಂಪೋ ಚಾಲಕರ ಮತ್ತು ಮಾಲಕರ ಸಂಘದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ  ನಾರಾಯಣ ನ್ಯಾಕ್ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ನೂತನ ಉಪಾಧ್ಯಕ್ಷರುಗಳಾಗಿ  ಮೋಹನ್ ಕುಂದರ್ ಮತ್ತು  ಜಗನ್ನಾಥ, ಕಾರ್ಯದರ್ಶಿಯಾಗಿ ಮಂಜುನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾಗಿ  ವಿಜಯ ಮಾನಂಪಾಡಿ ಮತ್ತು  ಅನಿಲ್ ಕುಮಾರ್, ಕೋಶಾಧಿಕಾರಿಯಾಗಿ ನಿತಿನ್ ದೇವಾಡಿಗ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಪಿ.ಆರ್ ರಾಜೇಶ್, ದೇವಣ್ಣ ನಾಯಕ್, ಲತೀಶ್ ಕುಂದರ್, ಚಂದ್ರಶೇಖರ್ ರಾವ್, ಸಂತೋಷ್ ಶೆಟ್ಟಿ ಚಿತ್ರಾಪು, ಸಂತೋಷ್ ಪೂಜಾರಿ, ಸುರೇಶ್ ದೇವಾಡಿಗ, ಮೋಹನ್ ಶೆಟ್ಟಿ, ಶೆಕ್ ಫಹಾದ್ (ಪಪ್ಪು), ಆಯ್ಕೆಯಾದರು. 
ಸಭೆಯಲ್ಲಿ  ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು  ವಿತರಿಸಲಾಯಿತು.
ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಅಭಿನಂದಿಸಿದ್ದಾರೆ