ವಿಜಯ ಯುವ ಸಂಗಮ ಎಕ್ಕಾರು ಇದರ ವತಿಯಿಂದ ನೂತನ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ
ಕಿನ್ನಿಗೋಳಿ: ಅರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ ನೀಡುವ ಕಾರ್ಯವನ್ನು ಸಂಘ ಸಂಸ್ಥೆಗಳು ಮಾಡಬೇಕು. ಈ ಮೂಲಕ ಮಾದರಿ ಸಂಸ್ಥೆಯಾಗಿ ಬೆಳೆಯಬೇಕು ಎಂದು ವಿಜಯ ಯುವ ಸಂಗಮ ಎಕ್ಕಾರು ಇದರ ಅಧ್ಯಕ್ಷ ಧನಂಜಯ ರೈ ಎಕ್ಕಾರು ಹೇಳಿದರು. ಅವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರಿನಲ್ಲಿ ವಿಜಯ ಯುವ ಸಂಗಮ ಎಕ್ಕಾರು ಇದರ ವತಿಯಿಂದ ಸುಖನ್ಯಾ ಹಾಗೂ ಗಾಯತ್ರಿಯವರಿಗೆ
ನೂತನ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ವಿಜಯ ಯುವ ಸಂಗಮದಿಂದ ಈ ಹಿಂದೆಯೂ ಬಡವರ್ಗದವರಿಗೆ ಮನೆ ನಿರ್ಮಾಣ ಮಾಡಿದ್ದು ಮತ್ತೆ ಮೂರು ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲಾಗುತ್ತಿದೆ ಎಂದರು. ಅತ್ತೂರು ಬೈಲು ರಾಘು ಉಡುಪರು ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯೆ ಮಲ್ಲಿಕಾ ಪ್ರಕಾಶ್, ಸಂಸ್ಥೆಯ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು, ಆದರ್ಶ್ ಶೆಟ್ಟಿ ಎಕ್ಕಾರು, ಅಭಿಲಾಷ್ ಶೆಟ್ಟಿ ಕಟೀಲು, ದೀಕ್ಷಿತ್ ಶೆಟ್ಟಿ ಸಿತ್ಲ, ನೀಲಯ್ಯ ಶೆಟ್ಟಿ ಹೊಸಮನೆ, ದಿನೇಶ್ ಆಚಾರ್ಯ, ಹರಿಶ್ಚಂದ್ರ ಆಚಾರ್ಯ, ವಿಕ್ರಂ ಮಾಡ, ವಿಜಯ್ ಮಾಡ, ಸದಾನಂದ ಶೆಟ್ಟಿ , ವಸಂತ ಪೂಜಾರಿ, ಮಿಥುನ್ ಆಚಾರ್ಯ, ಯುವರಾಜ್ ಆಚಾರ್ಯ , ಗಿರೀಶ್ ಶೆಟ್ಟಿ ಕುಡ್ತಿಮಾರುಗುತ್ತು, ಪ್ರವೀಣ್ ಮಾಡ, ನಿತೇಶ್ ಶೆಟ್ಟಿ , ಸುರೇಶ್ ಶೆಟ್ಟಿ, ಮಾಡರ ಮನೆ, ತಾರಾನಾಥ ಶೆಟ್ಟಿ ಹೊಸ ಒಕ್ಲು, ರಾಜೇಶ್ ಮೂಲ್ಯ ಕಾಯಿಮಠ, ರೇವತಿ ಆಚಾರ್ಯ, ಕುಸುಮ ಆಚಾರ್ಯ, ಕಮಲಾಕ್ಷ ಶೆಟ್ಟಿ, ಸತೀಶ್ ಶೆಟ್ಟಿ ಎಕ್ಕಾರು, ಹೇಮಂತ್ ಅಮೀನ್, ಜಗದೀಶ್ ಆಚಾರ್ಯ ಸುರಗಿರಿ,ಮಧುಸೂದನ್, ಉದಯ ಶೆಟ್ಟಿ, ವಿನೋದ್ ಶೆಟ್ಟಿ, ಕಿಶೋರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.