Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸಮಾಜದ ಅನ್ನಭದ್ರತೆಯ ಕೃಷಿಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ - ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು

ಮುಲ್ಕಿ:ಬೇಸಿಗೆಯ ಬೆವರು, ಮಳೆಯ ಕಷ್ಟ, ಮಣ್ಣಿನ ಒಡನಾಟ ಎಲ್ಲವನ್ನೂ ಅಪ್ಪಿಕೊಂಡು, ಕೃಷಿ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ ಕೃಷಿಕರು, ತಮ್ಮ ಪರಿಶ್ರಮದಿಂದ ಕೇವಲ ಕುಟುಂಬವನ್ನೇ ಅಲ್ಲ, ಸಮಾಜದ ಅನ್ನಭದ್ರತೆಯ  ಕೃಷಿಕರನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಕೊಡೆತ್ತೂರು ಶ್ರೀ ಅರಸು ಕುಂಜೂರಾಯ ಆಡಳಿತ ಮಂಡಳಿ ಟ್ರಸ್ಟ್ ನ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೇಳಿದರು.
ಅವರು ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನವಿಕಾಸ ಸಮಿತಿಯ ಸಹಕಾರದಲ್ಲಿ  ಕಿನ್ನಿಗೋಳಿ ಸಮೀಪದ ಕೊಡೆತ್ತೂರಿನ ಸಂಕೇಸ ಮನೆಯಲ್ಲಿ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಆಹಾರ ಜಾಗೃತಿ-2026ರ ಕಾರ್ಯಕ್ರಮದಲ್ಲಿ ಸುಮಾರು ಒಂದು ದಶಕಗಳಿಂದ  ಕೃಷಿ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಕಿನ್ನಿಗೋಳಿ ಕೊಡೆತ್ತೂರಿನ ಪ್ರವೀಣ್ ಶೆಟ್ಟಿ ರವರಿಗೆ ಕೃಷಿ ರತ್ನ - 2026 ಪ್ರಸಕ್ತಿ ನೀಡಿ ಗೌರವಿಸಿ  ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು.
 ವೇದಿಕೆಯಲ್ಲಿ ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ  ಜನವಿಕಾಸ ಸಮಿತಿಯ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ, ಸದಸ್ಯರಾದ ಗೀತಾ ಶೆಟ್ಟಿ, ಶೋಭಾ ರಾವ್, ಶಶಿಕರ ಕೆರೆಕಾಡು, ಅಕ್ಷತಾ ಶೆಟ್ಟಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು, ಜನವಿಕಾಸ ಸಮಿತಿ ಸದಸ್ಯ ಕೊಡೆತ್ತೂರು ದಾಮೋದರ ಶೆಟ್ಟಿ ವಂದಿಸಿದರು, ಶಿಮಂತೂರಿನ ಶ್ರೀ ಶಾರದಾ ಶಾಲೆಯ ಪ್ರಾಂಶುಪಾಲರಾದ ಜಿತೇಂದ್ರ ವಿ.ರಾವ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.