ಎಸ್‌ಐಅರ್ ಪ್ರಕ್ರಿಯೆಗಳು ಪಾರದರ್ಶಕ ನಿಷ್ಪಕ್ಷವಾಗಿ ಮಾಡಲಾಗುತ್ತಿದೆ . ಕಾಂಗ್ರೆಸ್ ಹತಾಷೆಯಿಂದ ಕಾರ್ಯಕರ್ತರ ಮೇಲೆ ಕೇಸು ದಾಖಲು ಖಂಡನೀಯ -ಉಮಾನಾಥ ಕೋಟ್ಯಾನ್
ಕಿನ್ನಿಗೋಳಿ : ಎಸ್ ಐಅರ್ ಪ್ರಕ್ರಿಯೆಗಳು ಪಾರದರ್ಶಕವಾಗಿ ನಿಷ್ಪಕ್ಷವಾಗಿ ಮಾಡಲಾಗುತ್ತಿದೆ. ಮೊದಲ ಹಂತದ ಕರಡು ಪ್ರತಿ ಪ್ರಕಟವಾಗಿದೆ. ಮೃತ ಪಟ್ಟವ್ಯಕ್ತಿಯ ಹಾಗೂ ವಾಸ್ತವ್ಯ ಇಲ್ಲದೆ ಇರುವವರ ಮೊದಲ ಹಂತದಲ್ಲಿ ಕೈ ಬಿಡಲಾಗಿದೆ. ಆದರೇ ಮತ್ತೆ ದಾಖಲೆ ನೀಡಿ ಸೇರ್ಪಡೆಗೆ ಅವಕಾಶ ಇದೆ ಆದರೇ ಕಾಂಗ್ರೆಸ್ ನವರ ಹತಾಷಾ ಭಾವನೆಯಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ದಾಖಲು ಮಾಡುವುದು ಖಂಡನೀಯ ಇದರ ಬಗ್ಗೆ ಮುಂದಕ್ಕೆ ಉಗ್ರ ಹೋರಾಟ ಮಾಡಲಾಗುವುದು ಎಂದು ಮೂಲ್ಕಿ - ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿ ದೇಶದ ಎಲ್ಲಾ ರಾಜ್ಯದಲ್ಲೂ ಎಸ್‌ಐಅರ್ ಪ್ರಕ್ರಿಯೆ ನಡೆಯಿತ್ತಿದೆ. ಕೆಲವು ರಾಜ್ಯದಲ್ಲಿ ಪ್ರಕ್ರಿಯೆ ನಡೆದು ಚುನಾವಣೆ ಆಗಿದೆ ಆದರೇ ಬಿಎಲ್‌ಒ ಗಳನ್ನು ಜಿಲ್ಲಾಧಿಕಾರಿಗಳೆ ನೇಮಕಮಾಡಿದ್ದು ಪಾರದರ್ಶಕವಾಗಿ ನಡೆದರೂ ಕಾಂಗ್ರೆಸ್‌ಗರು ಇಲ್ಲ ಸಲ್ಲದ ಅರೋಪ ಮಾಡಿ ಬಿಜಪಿ ಕಾರ್ಯಕರ್ತೆರಿಗೆ ಕಿರುಕುಳ ನೀಡುವುದು ನಾವು ಸಹಿಸುದಿಲ್ಲ ಎಂದು ತಿಳಿಸಿದರು.
ಬಿಜೆಪಿ ನಾಯಕ ಸುನೀಲ್ ಆಳ್ವ ಮಾತನಾಡಿ ಮೊದಲ ಹಂತದಲ್ಲಿ ಎಸ್‌ಐಅರ್ ಪ್ರಕ್ರಿಯೆ ಮುಗಿದು ಕರಡು ಮತ ಪಟ್ಟಿಬಂದ ಮೇಲೆ ಕಾಂಗ್ರೆಸ್ ಪಕ್ಷ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಮತದಾರ ಪಟ್ಟಿಯನ್ನು ಸರಿ ಪಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಉತ್ತಮ ಕೆಲಸ ಮಾಡುತ್ತಿದೆ ಆದರೇ ಕಾಂಗ್ರೆಸ್ ನವರು ಅಕ್ಷೇಪ ಮಾಡುವುದು ಸರಿಯಲ್ಲಿ ಇದರ ಬಗ್ಗೆ ನಾವು ಆಯೋಗಕ್ಕೆ ದೂರು ನೀಡಲಾಗುವುದು. ಸುದ್ದಿ ಗೋಷ್ಟಿಯಲ್ಲಿ ಮೂಲ್ಕಿ ಮೂಡ ಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ , ಬಿಜೆಪಿ ನಾಯಕರಾದ ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್ , ರಂಜಿತ್ ಪೂಜಾರಿ, ಶಾಂತಿಪ್ರಸಾದ್ ಹೆಗ್ಡೆ , ಗುರುರಾಜ ಮಲ್ಲಿಗೆಯಂಗಡಿ, ಶೋಬೆಂದ್ರ ಸಸಿಹಿತ್ಲು , ಗೀತಾ ಸೆನವ, ಕೇಶವ ಕರ್ಕೇರಾ, ಉಪಸ್ಥಿತರಿದ್ದರು.