ಜ್ಞಾನಪರಂಪರೆಯ ನನ್ನ ಹೆಮ್ಮೆಯ ಭಾರತ - ಮುಮ್ತಾಸ್ ನೆಲ್ಯಡ್ಕ
ಕಟೀಲು : ನಮ್ಮ ಪೂರ್ವಿಕರು ಮೌಲ್ಯಗಳನ್ನು, ಧೈರ್ಯವನ್ನು, ಜ್ಞಾನವನ್ನು ಕೊಟ್ಟು ಹೋಗಿದ್ದಾರೆ. ನಮ್ಮ ಪೂರ್ವಜರು ಎಲ್ಲವನ್ನೂ ಸರ್ಚ್ ಮಾಡಿದ್ದಾರೆ. ನಾವೇನಿದ್ದರೂ ರೀಸರ್ಚ್ ಮಾಡುತ್ತಿರುವುದು ಎಂದು ಪತ್ರಕರ್ತೆ ಮುಮ್ತಾಸ್ ಅಬ್ದುಲ್ ನೆಲ್ಯಡ್ಕ ಹೇಳಿದರು.
ಅವರು ಕಟೀಲು ನುಡಿಹಬ್ಬದಲ್ಲಿ ನನ್ನ ಹೆಮ್ಮೆಯ ಭಾರತದ ಕುರಿತು ಮಾತನಾಡಿದರು.
ಭಾರತ ದೇಶ ಅನುಭವಿಸಿದಷ್ಟು ಆಕ್ರಮಣಗಳನ್ನು ಬೇರೆ ಯಾವ ದೇಶವೂ ಅನುಭವಿಸಿಲ್ಲ, ಆದರೂ ಭಾರತ ಮತ್ತೆ ಎದ್ದು ನಿಂತಿದೆ.
ಯುವ ಜನತೆ ಬರೀ ರೀಲ್ಸ್ಗಳಿಗೆ ಸೀಮಿತವಾಗಿದ್ದಾರೆ ಎಂಬ ಅಪವಾದವಿದೆ. ಅದನ್ನು ಸುಳ್ಳಾಗಿಸಬೇಕು, ನಾವೂ ನಮ್ಮ ಭವ್ಯ ಭಾರತವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗುವವರು ಎಂಬುದನ್ನು ತಿಳಿಯಪಡಿಸಬೇಕು. ನಮ್ಮ ಹೃದಯದಲ್ಲಿ ಭಾರತಕ್ಕೆ ಮೊದಲ ಸ್ಥಾನವಿರಲಿ, ಭಾರತ ನಮಗೆ ಅಸ್ಮಿತೆಯನ್ನು ಕೊಟ್ಟಿದೆ, ಇಲ್ಲಿನ ವೈವಿಧ್ಯ ಬೇರೆಲ್ಲೋ ಕಾಣ ಸಿಗುವುದಿಲ್ಲ. ಭಾರತೀಯರು ಎಲ್ಲರೂ ಸುಖವಾಗಿರಲಿ ಎಂದು ಬೇಡುವವರು ಅಂತಹ ಮನಸ್ಸು ಯಾವ ದೇಶದಲ್ಲೂ ಕಾಣಸಿಗುವುದಿಲ್ಲ. ನಾವು ಇಲ್ಲಿನ ನದಿಗಳನ್ನು, ಭೂಮಿಯನ್ನು ತಾಯಿಯಂತೆ ಕಂಡವರು. ಇಂತಹ ಗುಣಗಳನ್ನು ಹೊಂದಿದೆ ನಮ್ಮ ದೇಶ ಶ್ರೇಷ್ಟ ಎಂದು ಮುಮ್ತಾಸ್ ಹೇಳಿದರು.
ಸಮ್ಮೇಳನಾಧ್ಯಕ್ಷ ಡಾ. ಬಿ ಜನಾರ್ದನ ಭಟ್, ಕಟೀಲು ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ಉದಯ ಶೆಟ್ಟಿ ಲೋನಾವಾಲ, ಉಷಾ ರಮೇಶ್ ಕೋಟೇಶ್ವರ, ಜಿತೇಂದ್ರ ಶೆಟ್ಟಿ ಶಿಬರೂರು ಉಪಸ್ಥಿತರಿದ್ದರು.