Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲಿನಲ್ಲಿ ಲಲಿತಾಪಂಚಮಿಯ ಪ್ರಯುಕ್ತ ದೇವಳದಲ್ಲಿ ರಾತ್ರಿ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ವಿತರಣೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಾಳೆ ಗುರುವಾರ ಲಲಿತಾಪಂಚಮಿಯ ಪ್ರಯುಕ್ತ ದೇವಳದಲ್ಲಿ ರಾತ್ರಿ ಅನ್ನಪ್ರಸಾದ್ ಸ್ವೀಕರಿಸುವ ಮಹಿಳಾ ಭಕ್ತರಿಗೆ ದೇವರ ಶೇಷ ವಸ್ತ್ರ ವಿತರಣೆಯಾಗಲಿದೆ. ನವರಾತ್ರಿಯಲ್ಲಿ ಲಲಿತಾ ಪಂಚಮಿ ಶ್ರೀ‌ಕ್ಷೇತ್ರ ಕಟೀಲಿನಲ್ಲಿ ವಿಶೇಷತೆಯಿಂದ ಕೂಡಿದ್ದು ಪ್ರತೀ ವರ್ಣ ಸಾವಿರಾರು ಭಕ್ತರು ದೇವಳಕ್ಕೆ ಭೇಟಿ ನೀಡಲಿದ್ದಾರೆ, ಈಗಾಗಲೇ ಭಕ್ತರ ಜನಸಂದಣಿ ನಿವಾರಣೆಗಾಗಿ ಮತ್ತು ನೂಕು ನುಗ್ಗಲು ಆಗದಂತೆ ಸರಧಿ ಸಾಲಿಗಾಗಿ ವ್ಯವಸ್ಥೆ ಕಲ್ಪಿಸಲಲಾಗಿದ್ದು, ದೇವಳದ ರಥ ಬೀದಿಬಸಜ್ಜಾಗಿದೆ, ದೇವಳದ ಮುಂಭಾಗದಲ್ಲಿ ಹಾದುಹೋಗಲು ಎತ್ತರದ ಪ್ಲಾಟ್ ಪಾಮ್ ನಿರ್ಮಿಸಲಾಗಿದೆ, ಸುಮಾರು 20 ಸಾವಿರ ಮಹಿಳಾ ಭಕ್ತರು ದೇವಳಕ್ಕೆ ಭೇಟಿ ನೀಡುವ ಸಾದ್ಯತೆ ಇದ್ದು, 20 ಸಾವಿರ ಸೀರೆಯನ್ನು ಇರಿಸಲಾಗಿದೆ, ರಾತ್ರಿಯ ಅನ್ನಪ್ರಸಾದ  ಸಂಜೆ 6.00 ಗಂಟೆಗೆ ಪ್ರಾರಂಭವಾಗಲಿದ್ದು ಈ ಸಂದರ್ಭ ಶೇಷವಸ್ತ್ರ ವಿತರಣೆಯಾಗಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.