ಕಟೀಲು ದೇವಳದ ಮೂಲ ಕುದ್ರುವಿನಲ್ಲಿ ಭ್ರಮರ
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮೂಲದ ಕುದ್ರುವಿನ ಗುಡಿಯ ಒಳಭಾಗದಲ್ಲಿ ಭ್ರಮರವೊಂದು ಕಾಣಿಸಿ ಭಕ್ತರಲ್ಲಿನ ಭಕ್ತಿ ಭಾವ ಹೆಚ್ಚಾಗಿದೆ, ಕಟೀಲು ಕ್ಷೇತ್ರದಿ ನೆಲೆ ನಿಂತ ದುರ್ಗೆ ಲೋಕಕಂಟಕನಾದ ಅರುಣಾಸುರನನ್ನು ದುಂಬಿ ರೂಪದಲ್ಲಿ ಸಂಹರಿಸಿದ ಕಾರಣ ಶ್ರೀ ದುರ್ಗೆಗೆ ಭ್ರಮರಾಂಭಿಕೆ ಎಂಬ ಹೆಸರು ಬಂದಿದೆ. ಈ ಕಾರಣ ದುಂಬಿಯನ್ನು ಕ್ಷೇತ್ರದಲ್ಲಿ ಭಕ್ತಿ ಭಾವದಿಂದ ಕಾಣಲಾಗುತ್ತದೆ, ಶ್ರೀ ಕ್ಷೇತ್ರದ ಸಮೀಪದಲ್ಲೇ ಮೂಲ ಕುದ್ರು ಎಂಬಲ್ಲಿ
ಪ್ರತೀ ನಿತ್ಯ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದು, ಗುರುವಾರ ಶ್ರೀ ಕ್ಷೇತ್ರದ ಅನಂತಪದ್ಮನಾಭ ಆಸ್ರಣ್ಣರು ಗುಡಿಯ ಭಾಗಿಲು ತೆಗೆದಾಗ ದುಂಬಿಯು ಗುಡಿಯ ಒಳಗಿರುವುದನ್ನು ಕಂಡಿದ್ದಾರೆ, ಇದೀಗ ದುಂಬಿಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.