ಕಟೀಲು ದೇವಳದಲ್ಲಿ ಭಕ್ತಸಾಗರ
ಕಟೀಲು:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಅಂಗವಾಗಿ ದೇವಳಕ್ಕೆ ಭಕ್ತಸಾಗರವೇ ಆದಿತ್ಯವಾರದಂದು ಹರಿದುಬಂದಿದೆ.ಈ ಸಂದರ್ಭ ಬಜಪೆ ಕಟೀಲು ರಾಜ್ಯ ಹೆದ್ದಾರಿ ಹಾಗೂ ಕಟೀಲು ಉಳ್ಳಂಜೆ ರಸ್ತೆಯುದ್ದಕ್ಕೂ ವಾಹನಗಳ ದಟ್ಟಣೆ ಹೆಚ್ಚಾಗಿತ್ತು.ಆದಿತ್ಯವಾರದಂದು ಸುಮಾರು 30 ಸಾವಿರ ಭಕ್ತರು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.ಸುಮಾರು 20 ಸಾವಿರ ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.ಕಟೀಲು ಉಳ್ಳಂಜೆ ರಸ್ತೆಯ ಅಂಚಿನಲ್ಲಿ ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಕೆಲ ಕಾಲ ಅಡಚಣೆ ಉಂಟಾಯಿತು.ಹಾಗೂ ಬಜಪೆ ಕಟೀಲು ರಾಜ್ಯ ಹೆದ್ದಾರಿಯ ಕಟೀಲು ಸೇತುವೆಯಿಂದ ದೇವಳದ ತನಕ ಸಂಚಾರ ಅಸ್ತವ್ಯಸ್ತ ಗೊಂಡಿತ್ತು.ಪೊಲೀಸರು ಹಾಗೂ ದೇವಳದ ಭದ್ರತಾ ಸಿಬ್ಬಂದಿಗಳು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.