Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಆರನೇ ವರ್ಷದ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮ

ಕಟೀಲು:ಕನ್ನಡ ಭಾಷೆಯ ಸುತ್ತ ಸಂಸ್ಕೃತಿ ಮತ್ತು  ಇತಿಹಾಸವಿದೆ, ಮಕ್ಕಳಲ್ಲಿ ಕನ್ನಡ ಉಳಿಸುವ ಹೊಣೆಗಾರಿಕೆ ಇದ್ದರೆ ಮಾತ್ರ ಉಳಿಸಲು ಸಾದ್ಯ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ  ಡಾ.ಚಿನ್ನಪ್ಪ ಗೌಡ ಹೇಳಿದರು .ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯೋಜನೆಯಲ್ಲಿ ಆರನೇ ವರ್ಷದ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಟೀಲು ಪದವಿ  ಕಾಲೇಜಿನಿಂದ ನುಡಿಹಬ್ಬ ವೇದಿಕೆಯ ತನಕ  ನಡೆದ ಮೆರವಣಿಗೆಗೆ ಮದ್ಯಗುತ್ತು ಕರುಣಾಕರ  ಶೆಟ್ಟಿ ಚಾಲನೆ ನೀಡಿದರು.ಕಾರ್ಡೋಲೈಟ್ ಸ್ಪೇಷಾಲಿಟಿ  ಕೆಮಿಕಲ್ಸ್ ನ ಜನರಲ್ ಮೆನೇಜರ್ ದಿವಾಕರ ಕದ್ರಿ ಧ್ವಜಾರೋಹಣಗೈದರು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಡಾ. ಬಿ ಜನಾರ್ಧನ ಭಟ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಟೀಲು ದೇವಳದ  ಮೊಕ್ತೇಸರ  ವಾಸುದೇವ ಆಸ್ರಣ್ಣ, ಮೊಕ್ತೇಸರ ಮತ್ತು ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಲಕ್ಷೀನಾರಾಯಣ ಆಸ್ರಣ್ಣ,  ಕಮಲಾದೇವಿಪ್ರಸಾದ ಆಸ್ರಣ್ಣ,  ಎಂ.ಆರ್.ಪಿ.ಎಲ್ ನ ಸಂಸ್ಥೆಯ ಸಿ.ಎಸ್ ಆರ್ ವಿಭಾಗದ ಕೇಶವ ಪಾಟಾಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ನ ಅಧ್ಯಕ್ಷ  ಎಂ.ಪಿ.ಶ್ರೀನಾಥ್ , ಕಬ್ಬಿನಾಲೆ ವಸಂತ ಭಾರಧ್ವಜ್, ಬಿಪಿನ್ ಚಂದ್ರ ಶೆಟ್ಟಿ ಕೊಡೆತ್ತೂರುಗುತ್ತು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರುಗಳಾದ ಲೋಕಯ್ಯ ಸಾಲಿಯಾನ್ ಕೊಂಡೇಲ, ಕಿರಣ್ ಕುಮಾರ್ ಶೆಟ್ಟಿ, ಭಾರತಿ  ಶೆಟ್ಟಿ ಎಕ್ಕಾರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳಾದ ಪ್ರಕಾಶ್ ಆಚಾರ್ಯ, ಗ್ರೇಗರಿ, ದೇವಿಪ್ರಸಾದ್ ಕಟೀಲು,  ಬಾಲಕೃಷ್ಣ ಪೂಂಜ, ಪದವೀ  ಕಾಲೇಜು ಪ್ರಾಂಶುಪಾಲ ಡಾ. ವಿಜಯ, ಪದವೀ ಪೂರ್ವ ವಿಭಾಗದ ಪ್ರಾಂಶುಪಾಲೆ ಕುಸುಮಾವತಿ, ರಾಜಶೇಖರ್,  ಸರೋಜಿನಿ, ಚಂದ್ರ ಶೇಖರ ಭಟ್, ಗಿರೀಶ್ ತಂತ್ರಿ,  ಸಂಚಾಲಕ ದಯಾನಂದ ಮಾಡ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ,  ಉಪನ್ಯಾಸಕಿ ಶೈಲಜ ಕಾರ್ಯಕ್ರಮ ನಿರೂಪಿಸಿದರು.