ಕಟೀಲು ದೇವಳಕ್ಕೆ ಕಾಂತಾರ ಖ್ಯಾತಿಯ ನಟ ರಿಷಭ್ ಶೆಟ್ಟಿ ಭೇಟಿ
ಕಟೀಲು : ಕಾಂತಾರ ಖ್ಯಾತಿಯ ಖ್ಯಾತ ಕನ್ನಡದ ಚಲನಚಿತ್ರ ನಟ ರಿಷಬ್ ಶೆಟ್ಟಿಯವರು ಕುಟುಂಬ ಸಮೇತ ಕಟೀಲು ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು .ಈ ಸಂದರ್ಭದಲ್ಲಿ ದೇವಳದ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ದೇವಿಯ ಶೇಷ ವಸ್ತ್ರ ನೀಡಿ ಗೌರವಿಸಿದರು.ದೇವಳದ ಆಡಳಿತ ಸಮಿತಿ ಹಾಗೂ ಅನುವಂಶಿಕ ಮೊಕ್ತೇಸರ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು ,ಅರ್ಚಕ ವೃಂದ ಹಾಗೂ ದೇವಳದ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.