ಕಟೀಲಿನಲ್ಲಿ ಪ್ರಸಾದರೂಪವಾಗಿ ಭಕ್ತರಿಗೆ ಸೇಬು ವಿತರಣೆ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಬಂದ ಐದು ಸಹಸ್ರಕ್ಕೂ ಹೆಚ್ಚು ಮಂದಿ ಭಕ್ತರಿಗೆ ಸೇಬುಗಳನ್ನುಪ್ರಸಾದ ರೂಪವಾಗಿ ವಿತರಿಸಲಾಯಿತು. ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಯು.ಮಲ್ಲಿಕಾರ್ಜುನ ಬೆಂಗಳೂರು ಅವರು ದೇವರಿಗೆ ಸಮರ್ಪಿಸಿದ ಸೇಬುಗಳನ್ನು ಅರ್ಚಕ ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಭಕ್ತರಿಗೆ ವಿತರಿಸಿದರು. ಕಳೆದ ವಾರವೂ ಐದು ಸಾವಿರ ಸೇಬು, ಕಿತ್ತಳೆಗಳನ್ನು ಮಲ್ಲಿಕಾರ್ಜುನ ಅವರು ಕಟೀಲು ದೇವರಿಗೆ ಸಮರ್ಪಿಸಿದ್ದರು. ನವರಾತ್ರಿಯ ಲಲಿತಾಪಂಚಮಿ ದಿನ ಭಕ್ತರಿಗೆ ಶೇಷವಸ್ತ್ರ ವಿತರಣೆಗೆ ಐದು ಲಕ್ಷ ರೂಪಾಯಿ ಕಾಣಿಕೆಯಾಗಿ ನೀಡಿದ್ದಾರೆ.