Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಟೀಲು ಗಿಡಿಗೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಟೀಲು:ಶ್ರೀ ಬ್ರಹ್ಮ ಮುಗೇರಾ ಮಹಾಂಕಾಳಿ ದೈವಸ್ಥಾನ, ಶ್ರೀ ಬ್ರಹ್ಮ ಮುಗೇರಾ ತಂಗಡಿ ಸೇವಾ ಸಮಿತಿ, ಶ್ರೀ ದುರ್ಗಾಂಬಿಕಾ ಯುವಕ ಮಂಡಲ (ರಿ,)ಗಿಡಿಗೆರೆ ಕಟೀಲು ಇದರ ಜಂಟಿ ಆಶ್ರಯದಲ್ಲಿ ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇದರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಟೀಲು ಗಿಡಿಗೆರೆ ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ಸಭಾಭವನದಲ್ಲಿ ನಡೆಯಿತು.

ಎ.ಜೆ ಆಸ್ಪತ್ರೆಯ ಸಮುದಾಯ ದಂತ ವಿಭಾಗದ ಪ್ರೊಫೆಸರ್ ಡಾ.ವಿಜಯ ಹೆಗ್ಡೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ  ಗಿಡಿಗೆರೆ ಶ್ರೀ ಬ್ರಹ್ಮಮುಗೇರ ದೈವಸ್ಥಾನದ ಅರ್ಚಕ ಸದಾಶಿವ ,ಕಿನ್ನಿಗೋಳಿ ಗ್ರಾ.ಪಂ ನ ಮಾಜಿ ಸದಸ್ಯ ಸಂತೋಷ್ ಕುಮಾರ್,ಕ  ಶ್ರೀ ದುರ್ಗಾಂಬಿಕಾ ಯುವಕ ಯುವತಿ, ಮಂಡಲದ ಗೌರವಾಧ್ಯಕ್ಷ ಕೃಷ್ಣ, ಶ್ರೀ ಬ್ರಹ್ಮ ಮುಗೇರಾ ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ಶ್ಯಾಮ, ಶ್ರೀ ದುರ್ಗಾಂಬಿಕಾ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ್ ,ನಾರಾಯಣ ಪೂಜಾರಿ, ಶ್ರೀಮತಿ ಭಾರತಿ, ಸುಕುಮಾರ್,ರಾಮ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಕುಮಾರಿ ಲಾಸ್ಯ ಕಟೀಲು ಪ್ರಾರ್ಥಿಸಿ, ಲಕ್ಷ್ಮಣ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.