ಹಳೆಯಂಗಡಿ:ಹಿರಿಯರ ಆದರ್ಶಗಳು ಯುವಕರಿಗೆ ದಾರಿದೀಪ-ಅಶೋಕ್ ಕುಮಾರ್ ಶೆಟ್ಟಿ
ಮುಲ್ಕಿ: ಹಳೆಯಂಗಡಿ ಮಹಿಳಾ ಮಂಡಲ ಹಾಗೂ ಮಂಗಳೂರು ಗಾಂಧಿನಗರ ಲಯನ್ಸ್ ಕ್ಲಬ್, ಜಂಟಿ ಆಶ್ರಯದಲ್ಲಿ ಯುವತಿ ಮತ್ತು ಮಹಿಳಾ ಮಂಡಲದ ಸಭಾಂಗಣದಲ್ಲಿ ಮಹಿಳಾ ಮಂಡಲದ ಹಿರಿಯ ಸದಸ್ಯರುಗಳನ್ನು ಗುರುತಿಸಿ ಗೌರವಿಸುವ ಮೂಲಕ ಇಂಟರ್ನ್ಯಾಷನಲ್ ಡೇ ಆಫ್ ಓಲ್ಡರ್ ಪರ್ಸನ್ಸ್ ಕಾರ್ಯಕ್ರಮ ನಡೆಯಿತು,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಿಂದಿನ ಕಾಲದಲ್ಲಿ ಅವರು ಮಾಡಿದ ತ್ಯಾಗ ಬಲಿದಾನಗಳಿಂದ ಇಂದು ನಾವು ಸ್ವತಂತ್ರ ದೇಶ ಭಾರತದ ಮಣ್ಣಿನಲ್ಲಿ ಜೀವನ ಸಾಗಿಸುತ್ತಿದ್ದೇವೆ. ಹಿರಿಯರ ಆದರ್ಶಗಳು ಯುವಕರಿಗೆ ದಾರಿದೀಪವಾಗಲಿ ಎಂದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈ ಭಾರತ್ ದ. ಕ. ಜಿಲ್ಲೆಯ ಆಡಳಿತಾಧಿಕಾರಿ
ಜಗದೀಶ್* ಕೆ ,ಗಾಂಧಿ ನಗರ,ಲಯನ್ಸ್ ಕ್ಲಬ್ ಅಧ್ಯಕ್ಷ
ಹರೀಶ್ ಕುಂಬ್ಳೆ,ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್ ಪ್ರಧಾನ
ಕಾರ್ಯದರ್ಶಿ ಸ್ಟ್ಯಾನಿ. ಡಿ. ಕೋಸ್ತ ಯುವಕ ಮಂಡಲದ ಅಧ್ಯಕ್ಷ
ಕಿರಣರಾಜ್ ಬಿ, ಮಹಿಳಾ ಮಂಡಲದ ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರಾದ ಭಾರತಿ ಶೆಟ್ಟಿಗಾರ್,
ಇಂದಿರಾ ಜಗದೀಶ್ ಹಾಗೂ ಸುನೀತ ರಾಮ ಮತ್ತಿತರರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು
ಮಾಜೀ ಅಧ್ಯಕ್ಷೆ ಸುಜಾತಾ ವಾಸುದೇವ್ ಸ್ವಾಗತಿಸಿದರು,
ಕೋಶಾಧಿಕಾರಿ ನಿಶಾ ಶರತ್ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಫರ್ಜಾನ ಸಮದ್ ಧನ್ಯವಾದ ಅರ್ಪಿಸಿದರು
ಪ್ರಧಾನ ಕಾರ್ಯದರ್ಶಿ ಮಂಜುಳ ಶುಬ್ರತ್ ಕಾರ್ಯಕ್ರಮವನ್ನು ನಿರೂಪಿಸಿದರು,