ಅಕ್ಟೋಬರ್ 25ರಂದು ಉಡುಪಿಯಲ್ಲಿ ಪ್ರಿಯದರ್ಶಿನಿ ಸೊಸೈಟಿ ಶಾಖೆ ಆರಂಭ
ಮಂಗಳೂರು: ಹಳೆಯಂಗಡಿಯಲ್ಲಿ ಪ್ರಧಾನಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಐದನೇ ಶಾಖೆಯು ಉಡುಪಿಯ ತಾಲೂಕು ಕಚೇರಿ, ಬಳಿಯ ಸನಿಲ್ ಪ್ಲಾಜಾ ಕಟ್ಟಡದಲ್ಲಿ ಅಕ್ಟೋಬರ್ 25 ರಂದು ಉದ್ಘಾಟನೆಗೊಳ್ಳಲಿದೆ ಎಂದು ಸೊಸೈಟಿ ಅಧ್ಯಕ್ಷರಾದಎಚ್ ವಸಂತ್ ಬೆರ್ನಾರ್ಡ್ ತಿಳಿಸಿದ್ದಾರೆ
ಸಹಕಾರಿರಂಗದ ದಿಗ್ಗಜರಾದ ದಿ.ಎಚ್ ನಾರಾಯಣ ಸನಿಲ್ ಮತ್ತು ದಿ.ಪಂಜದಗುತ್ತು ಶಾಂತರಾಮ ಶೆಟ್ಟಿರವರ ಪ್ರೇರಣೆಯಂತೆ ಕಳೆದ ಐದು ವ?ದ ಹಿಂದೆ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೋ ಆಪರೇಟಿವ್ ಪ್ರಸ್ತುತ 45 ಕೋಟಿ ಠೇವಣಿ ಹೊಂದಿದ್ದು,484.78 ಕೋಟಿ ವಹಿವಾಟು ಮಾಡಿ3843 ಸದಸ್ಯರನ್ನು ಹೊಂದಿ 54 ಲಕ್ಷ ವಾರ್ಷಿಕ ಲಾಭವನ್ನು ಪಡೆದು, ನಾಲ್ಕು ಶಾಖೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು ಇದೀಗ5 ನೇ ಶಾಖೆಯು ಉಡುಪಿಯಲ್ಲಿ ಮಾಜೀ ಸಚಿವ ವಿನಯ್ಕುಮಾರ್ ಸೊರಕೆರವರು ಉದ್ಘಾಟನೆ ಮಾಡುವುದರೊಂದಿಗೆ ಪ್ರಾರಂಭಗೊಳ್ಳಲಿದೆ. ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು, ದೀಪ ಪ್ರಜ್ವಲನೆಯನ್ನುಕರ್ನಾಟಕ ಸರಕಾರದ ಮಾಜೀ ಸಚಿವರಾದ ಕೆ. ಅಭಯಚಂದ್ರರವರು, ಭದ್ರತಾಕೊಠಡಿ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕ ಐವನ್ ಡಿ'ಸೋಜರವರು, ಕಂಪ್ಯೂಟರ್ ವ್ಯವಸ್ಥೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ಎಮ್ ರೈರವರು, ಪ್ರಿಯದರ್ಶಿನಿ ಸ್ವ-ಸಹಾಯ ಗುಂಪಿಗೆ ಚಾಲನೆಯನ್ನು ಕರ್ನಾಟಕರಾಜ್ಯ ಹಾಲು ಉತ್ಪಾದಕರಒಕ್ಕೂಟ(ಏಒಈ) ಮತ್ತುದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ ನಿರ್ದೇಶಕರಾದಡಾ. ಐಕಳಬಾವ ಡಾ.ದೇವಿ ಪ್ರಸಾದ್ ಶೆಟ್ಟಿಯವರುಗೈಯಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ. ಆರ್ರವರು, ಉಡುಪಿ ಜಿಲ್ಲಾಕೇಂದ್ರ ಸಹಕಾರಿಯೂನಿಯನ್ ಮತ್ತು ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಲಿ. ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿರವರು, ಉಡುಪಿ ಪಡುಕುತ್ಯಾರ್ ಸರಸ್ವತಿ ಕೋ ಆಪರೇವಿಟ್ ಸೊಸೈಟಿ ಅಧ್ಯಕ್ಷ ಬಿ. ಸೂರ್ಯಕುಮಾರ್ರವರು, ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ ,ಹೈಟೆಕ್ ಮೆಡಿಕೆರ್ ಹಾಸ್ಪಿಟಲ್ ಉಡುಪಿ ಎಂ.ಡಿ. ಡಾ| ಟಿ. ಎಸ್. ರಾವ್, ಎಂ ಎಸ್ ರವರು, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಶ್ರೀಧರ್ ದೇವಾಡಿಗ, ಉಡುಪಿ ತಾಲೂಕುಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರಮೇಶ್ಕಾಂಚನ್ರವರು, ಹೋಮಿಯೋಪಥಿಕ್ ಫಿಶಿಷಿಯನ್ ಡಾ| ಬೆರಿಲ್ ಎ. ಬೆರ್ನಾರ್ಡ್, ಕಟ್ಟಡ ಮಾಲೀಕ ಶಂಭು ಎ. ಸನಿಲ್ ರವರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಸೊಸೈಟಿ ಅಧ್ಯಕ್ಷರಾದ ವಸಂತ್ ಬೆರ್ನಾಡ್ ತಿಳಿಸಿದರು
ಅವರು ಮಾತನಾಡಿ ಸೊಸೈಟಿಯು2021 ರಲ್ಲಿ ಪ್ರಾರಂಭಗೊಂಡು, ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ., ಅಧ್ಯಕ್ಷ ಡಾ|| ಎಂ.ಎನ್ರಾಜೇಂದ್ರ ಕುಮಾರ್ರವರ ಮಾರ್ಗದರ್ಶನದಲ್ಲಿ ಉತ್ತಮವಾಗಿಕಾರ್ಯನಿರ್ವಹಿಸುತ್ತಿದೆ. 2025-26 ನೇ ಸಾಲಿನಲ್ಲಿ97% ಸಾಲ ವಸೂಲಾತಿ ನಡೆಸಿ ಲೆಕ್ಕಪರಿಶೋಧನಾ ವರದಿ (ಆಡಿಟ್ ವರದಿ) ಕೂಡಾಎ ಶ್ರೇಣಿಯಲ್ಲಿದ್ದು, ಹೆಮ್ಮೆ ಪಡುವಂತಾಗಿದೆ. ಸೊಸೈಟಿಯಲ್ಲಿಅಡಮಾನಕ್ಕೆ ಬರುವ ಚಿನ್ನಾಭರಣಗಳ ನೈಜತೆ ಮತ್ತು ಪರಿಶುದ್ಧತೆಯ ನಿಖರತೆಗಾಗಿ ಪ್ರಧಾನಕಚೇರಿಯಲ್ಲಿಗೋಲ್ಡ್ ಪ್ಯೂರಿಟಿ ಟೆಸ್ಟಿಂಗ್ ಮೆಷಿನ್ನ್ನು,ಸೊಸೈಟಿಯ 4 ಶಾಖೆಗಳಲ್ಲೂ ಇ-ಮುದ್ರಾಂಕ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ,ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗವನ್ನು ಹೊಂದಿರುತ್ತದೆ. ಸಂಘದಲ್ಲಿ 27ಸಿಬ್ಬಂದಿಗಳು ಕಾರ್ಯನಿರ್ವಹಿಸುತಿದ್ದಾರೆ ಹಾಗೂ ಒಟ್ಟು 15 ನಿರ್ದೇಶಕರ ತಂಡ ಇದೆ. ಇವರೆಲ್ಲರ ಶ್ರಮದಿಂದಲೇ2023-24ನೇ,2024 -25ನೇ ಮತ್ತು2025 -26ನೇ ಸಾಲಿನಲ್ಲಿದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕಿನಿಂದ ವಿಶಿಷ್ಟ ಸಾಧನ ಪ್ರಶಸಿದೊರಕಿರುತ್ತದೆ. ಹಾಗೂ 72ನೇ ಅಖಿಲ ಭಾರತ ಸಹಕಾರ ಸಪ್ತಾಹ2025 ರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಬೆಂಗಳೂರು ಮತ್ತುದ.ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರು ಉತ್ತಮ ಪತ್ತಿನ ಸಹಕಾರಿ ಸಂಘ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಎಂದು ಹೇಳಿದರು
ಪತ್ರಿಕಾ ಗೋಷ್ಠಿಯಲ್ಲಿ ಸೊಸೈಟಿ ಉಪಾಧ್ಯಕ್ಷರಾದ ವಿಜಯಕುಮಾರ್ ಸನಿಲ್, ನಿರ್ದೇಶಕರಾದ ಉಮಾನಾಥ್ಜೆ ಶೆಟ್ಟಿಗಾರ್, ಧನಂಜಯ ಮಟ್ಟು, ಗಣೇಶ್ ಪ್ರಸಾದ್ದೇವಾಡಿಗ, ಅನಿಲ್ ಪೂಜಾರಿ ಸಸಿಹಿತ್ಲು, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಸುದರ್ಶನ್ ಪೂಜಾರಿ, ಉಡುಪಿ ಶಾಖಾ ಪ್ರಬಂಧಕರಾದ ನಿಶಾ ಸುಹೈಲ್ ಡೇನಿಯಲ್ ಉಪಸ್ಥಿತರಿದ್ದರು.