Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

MRPL ಕಾರ್ಗೋ ಗೇಟ್ ಬಳಿ ಪ್ರತಿಭಟನೆ

ಮಂಗಳೂರು:ಎಂ, ಅರ್. ಪಿ, ಎಲ್ ನಲ್ಲಿ ನಿನ್ನೆ ನಡೆದ ಅವಘಡದಲ್ಲಿ  ಓರ್ವ  ಮೃತ ಪಟ್ಟಿದ್ದು ಆತನಿಗೆ ದೊರಕಬೇಕಾದ ಎಲ್ಲಾ  ಸೌಲಭ್ಯ ಗಳನ್ನು ಸಂಸ್ಥೆಯು ನೀಡಬೇಕು ಎಂದು ಅಗ್ರಹಿಸಿ ಇಂದು ಎಂ, ಅರ್, ಪಿ, ಎಲ್ ಕಾರ್ಗೋ ಗೇಟ್ ಬಳಿ ಬೃಹತ್  ಪ್ರತಿಭಟನೆ ನಡೆಯಿತು. ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ 1 ಕೋಟಿ ಪರಿಹಾರ ಮೊತ್ತ  ನೀಡಬೇಕು. ಮೃತಪಟ್ಟ ಕುಟುಂಬದ  ಸದಸ್ಯರಿಗೆ ಉದ್ಯೋಗ ನೀಡಬೇಕು. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚ ಹಾಗೂ ವೇತನ ಸಹಿತ ಸಂಬಳ ನೀಡಬೇಕು ಮತ್ತು ಎಂ ಆರ್ ಪಿ ಎಲ್ ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಮೆಡಿಕಲ್ ಸೌಲಭ್ಯ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪ್ರತಿಭಟನೆಯಲ್ಲಿ ನೀಡಲಾಯಿತು. 

ಈ ಬಗ್ಗೆ  ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ಎಂ ಆರ್ ಪಿ ಎಲ್ ನ ಆಡಳಿತ ನಿರ್ದೇಶಕರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಎಂಪ್ಲಾಯಿಸ್ ಯೂನಿಯನ್ ಪದಾಧಿಕಾರಿಗಳು ಹಾಗೂ ಕರ್ಮಚಾರಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಎಂಆರ್‌ಪಿಎಲ್ ನಲ್ಲಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಈ  ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಪರಿಹಾರ ಧನ ಕುಟುಂಬಸ್ಥರಿಗೆ ನೀಡುವ ಬಗ್ಗೆ  ಒಂದು ಕೋಟಿ ಹತ್ತಿರ ತನಕ ನೀಡಲು  ನಿರ್ಧರಿಸಲಾಯಿತು. ಚಿಕಿತ್ಸೆ ವೆಚ್ಚವನ್ನು ಸಂಸ್ಥೆ ವತಿಯಿಂದ ವೇತನ ಸಹಿತ ನೀಡಲು  ತೀರ್ಮಾನಿಸಲಾಯಿತು. ಹಾಗೂ ಎಮ್ ಆರ್ ಪಿ ಎಲ್ ನಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಮೆಡಿಕಲ್ ಸೌಲಭ್ಯವನ್ನು ಮುಂದಿನ ಹದಿನೈದು ದಿನದೊಳಗೆ ಮಾಡುವುದಾಗಿ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್,ಎಂ ಆರ್ ಪಿ ಎಲ್ ಸಂಸ್ಥೆಯ ಎಚ್ಆರ್ ವಿಭಾಗದ ಜಿಜಿಎಂ ಪ್ರಶಾಂತ ಪಡ್ವಾಲ್, ಜಿಎಂ ಮನೋಜ್ ಕುಮಾರ್ ಎಂ,ಆರ್‌,ಪಿ,ಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ ಉಪಾಧ್ಯಕ್ಷ ಸತೀಶ್ ಮಂಗಳ ಪೇಟೆ,ಪ್ರಧಾನ ಕಾರ್ಯದರ್ಶಿ ಸಾಯಿ ಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್ ಉಪಾಧ್ಯಕ್ಷ ಸುರೇಶ್ ಪುಸ್ರಾಲ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್ ಜತ ಕಾರ್ಯದರ್ಶಿ ಸುನಿಲ್ ಬೋಳ,ಸುರೇಶ ಪೂಜಾರಿ, ಕೋಶಾಧಿಕಾರಿ ಪುರುಷೋತ್ತಮ್, ಋಸ್ ಸಿ ವಿಭಾಗದ ಅಧ್ಯಕ್ಷ ಸಂತೋಷ್ ಪ್ರಮುಖರಾದ ಸತ್ಯಜಿತ್ ಸುರತ್ಕಲ್ ಪ್ರಶಾಂತ್ ಮುಡಾಯಿಕೋಡಿ, ಪುಷ್ಪರಾಜ್ ಶೆಟ್ಟಿ ಮಧ್ಯ,ಲೋಕೇಶ್ ಬೊಳ್ಳಾಜೆ, ಭರತ್ ರಾಜ್ ಕೃಷ್ಣಾಪುರ,ಪ್ರವೀಣ್ ಕೃಷ್ಣಾಪುರ ಸುರತ್ಕಲ್ ಆರಕ್ಷಕ   ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಉಪ ಠಾಣಾಧಿಕಾರಿ ರಘು ನಾಯಕ್ ಮುಂತಾದವರು ಉಪಸ್ಥಿತರಿದ್ದರು.