ಬಜ್ಪೆಯಲ್ಲಿ ಹೈಡ್ರಾಮಾ ನಡೆಸಿದ ಮಾಜಿ ಅಧ್ಯಕ್ಷರ ರಾಜಕೀಯ ಲೆಕ್ಕಾಚಾರಕ್ಕೆ ಹಿನ್ನಡೆ!
ಬಜ್ಪೆ:ಹೂವಿನ ಬೀದಿ ವ್ಯಾಪಾರಿಯನ್ನು ತೆರವುಗೊಳಿಸಿದ ವಿಚಾರದಲ್ಲಿ ರಾಜಕೀಯ ಪ್ರಚಾರಕ್ಕೆ ಮುಂದಾದ ಬಜ್ಪೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರ ನಡೆ ಚರ್ಚೆಗೆ ಗ್ರಾಸವಾಗಿದೆ.
ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೂವಿನ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸುಮಾರು 12 ವರ್ಷಗಳ ಹಿಂದೆಯೇ ಪ್ರತ್ಯೇಕ ಹೂವಿನ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಹೀಗಿರುವಾಗ, ಮಾರುಕಟ್ಟೆಯ ನಿಯಮಗಳನ್ನು ಪಾಲಿಸಿ ವ್ಯಾಪಾರ ನಡೆಸುವ ಬದಲು ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಅಂಗಡಿ ಸ್ಥಾಪಿಸಲು ಮುಂದಾದರೆ, ಅದನ್ನು ತೆರವುಗೊಳಿಸುವುದು ಪಟ್ಟಣ ಪಂಚಾಯತ್‌ನ ನಿಯಮಬದ್ಧ ಕ್ರಮದ ಭಾಗವಾಗಿದೆ. ಸ್ವ ಪಕ್ಷದ ಕೌನ್ಸಿಲರ್ ನಿಂದಲೇ ಆಕ್ಷೇಪ ನಡೆದಿರುವುದು ಕೂಡಾ ಕಾಂಗ್ರೆಸ್ ಮುಖಂಡನಿಗೆ ಮುಜುಗರವಾಗಿದೆ .
ಬೀದಿ ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆಯಾಗಬಾರದು ಎಂಬುದು ಎಷ್ಟು ಮುಖ್ಯವೋ, ಸಾರ್ವಜನಿಕ ಸ್ಥಳಗಳ ನಿರ್ವಹಣೆ ಮತ್ತು ಪಟ್ಟಣದ ವ್ಯವಸ್ಥೆಯನ್ನು ಕಾಪಾಡುವುದೂ ಅಷ್ಟೇ ಮುಖ್ಯ. ಈ ವಿಚಾರವನ್ನು ರಾಜಕೀಯ ಲಾಭದ ದೃಷ್ಟಿಯಿಂದ ನೋಡುವ ಬದಲು, ಹೂವಿನ ವ್ಯಾಪಾರಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ.
ತಾನೆ ತೋಡಿದ ಖೆಡ್ಡಾಕ್ಕೆ ಬಿದ್ದ ಮಾಜಿ ಅಧ್ಯಕ್ಷನ ನಡೆ ಹಾಸ್ಯಾಸ್ಪದವಾಗಿದೆ.
ಬಜ್ಪೆಯ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿಯೇ ಮುಖ್ಯ; ರಾಜಕೀಯ ಪ್ರಚಾರವಲ್ಲ!