Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಜ್ಪೆ:ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾಟ

ಬಜ್ಪೆ:ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಉಪ ನಿರ್ದೇಶಕರ ಕಚೇರಿ,  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ಉತ್ತರ ವಲಯ, 
ಸಂತ ಜೋಸೆಫರ ಪದವಿ ಪೂರ್ವ ಕಾಲೇಜು, ಬಜ್ಪೆ 
ಪ್ರೌಢಶಾಲಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ
ಮೈಸೂರು ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭವು  ನಡೆಯತು. ಸಂಸ್ಥೆಯ ಸಂಚಾಲಕ ವಂದನೀಯ ಫಾದರ್. ಆಂಡ್ರ್ಯೂ ಡಿ'ಸೋಜಾ ಎರಡು ದಿನಗಳ ಪಂದ್ಯಾಟವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಬಜ್ಪೆ ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಪೂಜಾರಿ ,ಸ್ಥಳೀಯ ವಾರ್ಡ್ ಕೌನ್ಸಿಲರ್ ಪದ್ಮನಾಭ,ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ  ವಿಷ್ಣು ನಾಯಕ್ ಹೆಬ್ಬಾರ್, ಮಂಗಳೂರು ಉತ್ತರ ತಾಲೂಕು ದೈಹಿಕ ಪರಿವೀಕ್ಷಕ  ಜೀವನ್ ಕುಮಾರ್ ಶೆಟ್ಟಿ , ಶ್ರೀಮತಿ ಆಶಾ ನಾಯಕ್,
ಬಜ್ಪೆಯ ಸಹಾಯಕ ಧರ್ಮುಗುರು ವಂದನೀಯ ಫಾದರ್ ವಿಜಯ್ ಮಾಂತೆರೋ,  ಸಂಸ್ಥೆಯ ಉಸ್ತುವಾರಿ , ಅಮ್ಮಂದಿರ ಸಂಘದ ಅಧ್ಯಕ್ಷೆ ಶ್ರೀಮತಿ ಲಿಡ್ವಿನ್ ಕಾರ್ಮಿನ್ ಡಿ ಕೊಸ್ತಾ,   ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ರೈ, ಹರೇಕಳ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಸಂಘಟನಾ ಕಾರ್ಯದರ್ಶಿ ತ್ಯಾಗಂ , ಮೋಹನ್ ಶಿರ್ಲಾಲು, 
 ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ನಿತಿನ್ ಪುತ್ರನ್ , ಎಂಸಿಸಿ ಬ್ಯಾಂಕ್ ಬಜ್ಪೆ ಮ್ಯಾನೇಜರ್  ಅನಿಲ್, ವಂದನೀಯ ಫಾದರ್ ಫ್ರಾನ್ಸಿಸ್  ಡಿಸೋಜಾ, ವಂದನೀಯ ಫಾದರ್ ಕೆವಿನ್ ಲಾರೆನ್ಸ್ ಡಿಸೋಜ , ಶ್ರೀಮತಿ ರೂಥ್ ಕ್ಯಾಸ್ಟೋಲಿನೊ ಉಪಸ್ಥಿತರಿದ್ದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ   ವಿಷ್ಣು ನಾರಾಯಣ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಸ್ಥೆಯ ಮುಖ್ಯೋಪಾಧ್ಯಾಯ ಆಲ್ವಿನ್ ನೋರೊನ್ಹ  ಸ್ವಾಗತಿಸಿದರು. ಶಿಕ್ಷಕ ಶ್ರೀ ಅಶ್ವಥ್ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ 14ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದರೆ ಮೈಸೂರು ಜಿಲ್ಲೆಯು ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ. 

14ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದರೆ ಕೊಡಗು ಜಿಲ್ಲೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತದೆ.