ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ದೇವಾಲಯ ವಜ್ರ ಮಹೋತ್ಸವ - ನವೀಕೃತ ದೇವಾಲಯ ಸಮರ್ಪಣೆಯ ಪ್ರಯುಕ್ತ ಹೊರೆ ಕಾಣಿಕೆ ಮೆರವಣಿಗೆ
ಬಜಪೆ:ಪೆರ್ಮುದೆಯ ಸಂತ ಸ್ನಾನಿಕ ಯೋಹಾನ್ನ ಚರ್ಚ್ನ ವಜ್ರ ಮಹೋತ್ಸವ ಸಂಭ್ರಮಾಚರಣೆ ಹಾಗೂ ನವೀಕೃತ ದೇವಾಲಯ ಸಮರ್ಪಣೆ ಸಮಾರಂಭ ಆ.15 ಗುರುವಾರ ನಡೆಯಲಿದ್ದು ಆ ಪ್ರಯುಕ್ತ ಭಾನುವಾರ ಹೊರೆ ಕಾಣಿಕೆ ಸಮರ್ಪಣೆ ಮೆರವಣಿಗೆಯು ನಡೆಯಿತು.
ಹೊರೆ ಕಾಣಿಕೆ ಮೆರವಣಿಗೆಗೆ ಕೈಕಂಬ ಚರ್ಚ್ನ ಧರ್ಮ ಗುರು ಅತೀ ವಂದನೀಯ ರುಡೊಲ್ಫ್ ರವಿ ಡೆಸಾ ಅವರು ಚಾಲನೆ ನೀಡಿ ಶುಭ ಹಾರೈಸಿದರು.
ಪವಿತ್ರಪಾಣಿ ವೇಣುಗೋಪಾಲ ಪೆಜತ್ತಾಯ, ಎಕ್ಕಾರು ಶ್ರೀ ಕೊಡಮಂತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ, ಗುರುರಾಜ್ ಮಾಡ,ಯಾದವ ಕೋಟ್ಯಾನ್, ಉಲ್ಲಾಸ್.ಆರ್.ಶೆಟ್ಟಿ,ರೆ.ಫಾ.
ಮ್ಯಾಕ್ಸಿಮ್ ಎಲ್ ನೊರೊನ್ನ,ರೆ.ಫಾ.ರುಡೊಲ್ಫ್ ರವಿ ಡೇಸಾ, ಪೆರ್ಮುದೆ ಸಂತ ಸ್ನಾನಿಕ ಯೋಹಾನ್ನ ಚರ್ಚ್ನ ಧರ್ಮ ಗುರುಗಳಾದ ರೊನಾಲ್ಡ್ ಪಿಂಟೋ,ಉದ್ಯಮಿ ರಾಘವೇಂದ್ರ ಆಚಾರ್ , ನಾನಾ ಸಮಿತಿಗಳ ಪ್ರಮುಖರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.