ರಕ್ತದಾನ ಅತ್ಯಂತ ಮಹತ್ವದ ಮಾನವೀಯ ಸೇವೆ - ಶಾಸಕ ಉಮಾನಾಥ ಕೋಟ್ಯಾನ್
ಬಜಪೆ:ಹಿಂದೂ ಯುವಸೇನೆ ಶ್ರೀದುರ್ಗಾಶಾಖೆ ಎಕ್ಕಾರು ಇದರ ಆಶ್ರಯದಲ್ಲಿ ಯೇನಪೊಯಾ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ 6 ನೇ ವರ್ಷದ ರಕ್ತದಾನ ಶಿಬಿರ,ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಸಹಯೋಗದೊಂದಿಗೆ ಅಪಘಾತ ವಿಮಾ ನೋಂದಣೆ ಹಾಗೂ ದುರ್ಗಾ ಸಂಜೀವನೀ ಮಣಿಪಾಲ್ ಆಸ್ಪತ್ರೆ ಕಟೀಲು ಸಹಯೋಗದಲ್ಲಿ ಕಣ್ಣಿನ ತಪಾಸಣಾ ಶಿಬಿರವು ಎಕ್ಕಾರು ಬಂಟರ ಭವನದಲ್ಲಿ ಭಾನುವಾರ ನಡೆಯಿತು.
ಸಭಾ ಕಾರ್ಯಕ್ರಮವನ್ನು ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ ಮಾತನಾಡಿ ರಕ್ತದಾನ ಅತ್ಯಂತ ಮಹತ್ವದ ಮಾನವೀಯ ಸೇವೆಯಾಗಿದ್ದು,ರಕ್ತದಾನದಿಂದ ಒಂದು ಜೀವವನ್ನು ಉಳಿಸಲು ಸಾಧ್ಯವಿದೆ ಎಂದರು.ವ್ಯವಸ್ಥಿತ ಹಾಗೂ ಶಿಸ್ತಿನಿಂದ ಆಯೋಜನೆಗೊಂಡ ಕಾರ್ಯಕ್ರಮದ ಬಗ್ಗೆ ಶಾಸಕರು ಶ್ಲಾಘಿಸಿದರು.
ಭಾಸ್ಕರ ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಬಜಪೆ ಪೊಲೀಸ್ ಠಾಣಾ ಪಿಎಸ್ಐ ರುಕ್ಮಯ .ಕೆ,ಗುರುರಾಜ ಮಲ್ಲಿಗೆಯಂಗಡಿ,ಲೋಕಯ್ಯ ಸಾಲ್ಯಾನ್ ಕಟೀಲು,ಶೈಲೇಶ್ ಅಂಚನ್ ,ಜಯಲಕ್ಷ್ಮೀ ಜಗದೀಶ್ ಆಚಾರ್ಯ,ತೃಪ್ತಿ ಎಸ್ ಶೆಟ್ಟಿ ಹಾಗೂ ರಚನಾ ರವರನ್ನು ಗೌರವಿಸಲಾಯಿತು.
ಕಣ್ಣಿನ ತಪಾಸಣಾ ಶಿಬಿರದಲ್ಲಿ 168 ಮಂದಿಗೆ ಕನ್ನಡಕ ಹಾಗೂ ಡ್ರಾಪ್ಸ್ ವಿತರಿಸಲಾಯಿತು.ರಕ್ತದಾನ ಶಿಬಿರದಲ್ಲಿ 90 ಯೂನಿಟ್ ರಕ್ತದಾನ ಸಂಗ್ರಹವಾಗಿದೆ. ಅಂಚೆ ಜನಸಂಪರ್ಕ ಅಭಿಯಾನದಲ್ಲಿ 150 ಮಂದಿಗೆ ಉಚಿತ ಆಧಾರ್ ತಿದ್ದುಪಡಿ ಹಾಗೂ 300 ಮಂದಿ ಉಚಿತವಾಗಿ ಅಪಘಾತ ವಿಮಾ ಯೋಜನೆಯಲ್ಲಿ ನೊಂದಾಯಿಸಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಬಿ.ಅರ್,ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಯುವ ಸೇನೆಯ ಕೇಂದ್ರೀಯ ಮಂಡಳಿ ಮಂಗಳೂರು ಅಧ್ಯಕ್ಷ ಯಶೋಧರ ಚೌಟ,ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರ ಮನೆ(ತಿಮ್ಮ ಕಾವರು),ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಈಶ್ವರ್ ಕಟೀಲ್,ಶಿವರಾಮ ಕೋಟ್ಯಾನ್ ಪೆರ್ಮುದೆ,ಕಸ್ತೂರಿಪಂಜ,ದಿನೇಶ್ ಪುತ್ರನ್ ,ಸ್ಟೇನಿ ಪಿಂಟೋ,ಕಿರಣ್ ಶೆಟ್ಟಿ,ತುಕರಾಮ ಪೂಜಾರಿ,ಡಾ.ಶಿವಾನಂದ ಪ್ರಭು,ಶಶಿಧರ ಶೆಟ್ಟಿ,ಕೃಷ್ಣರಾಜ ವಿಠ್ಠಲ್ ಭಟ್,ಪೃಥ್ವಿರಾಜ್ ಶೆಟ್ಟಿ ಸುರತ್ಕಲ್,ದಿನೇಶ್ ಕುಕ್ಯಾನ್,ರವಿಚಂದ್ರ ಎಕ್ಕೂರು,ಶಿವಪ್ರಸಾದ್ ಶೆಟ್ಟಿ,ಪ್ರದೀಪ್ ಕುಮಾರ್ ಶೆಟ್ಟಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.