ಹಸಿರು ವಲಯಕ್ಕಾಗಿ (ಬಫರ್ ಝೋನ್)MRPL ಮತ್ತು MSEZ ಸಂಸ್ಥೆ ಸುತ್ತಲಿನ ವ್ಯಾಪ್ತಿಯ ಮನೆಗಳನ್ನು ಕೂಡಲೇ ಸ್ವಾದೀನ ಪಡಿಸಿ ಪರಿಹಾರ ಘೋಷಿಸಬೇಕು - ಸಿರಾಜ್ ಬಜ್ಪೆ
ನಿನ್ನೆ MRPL ಘಟಕದಲ್ಲಿ ನಡೆದ ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಸಂಭವನೀಯ ಲೋಪದೋಷಗಳು ಹಾಗೂ ಕೈಗಾರಿಕಾ ಸುರಕ್ಷತಾ ಕ್ರಮಗಳ ಕುರಿತು ಬಜ್ಪೆ ನಾಗರಿಕ ರಕ್ಷಣಾ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿಶೇಷವಾಗಿ ಬಫರ್ ಝೋನ್ ಮತ್ತು ಹಸಿರು ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದೆ ಎಂದು ವೇದಿಕೆ ಒತ್ತಾಯಿಸಿದೆ. ಕೈಗಾರಿಕಾ ಘಟಕಗಳ ಸುರಕ್ಷತಾ ನಿಯಮಗಳಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದರೂ ಅದನ್ನು ಸಹಿಸಲಾಗುವುದಿಲ್ಲ ಎಂದು ವೇದಿಕೆ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಬಜ್ಪೆ ನಾಗರಿಕರಾ ಹಿತಾ ರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ ಅವರು MRPL ಆಡಳಿತಕ್ಕೆ ಎಚ್ಚರಿಕೆ ನೀಡಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ಬಲಪಡಿಸಬೇಕು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು,ಆತಂಕದಲ್ಲಿ ಬದುಕುವ ಸುತ್ತಲಿನ ಕುಟುಂಬಗಳ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ .