Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಆ.4:ಹಿಂದೂ ಯುವಸೇನೆ ಶ್ರೀದುರ್ಗಾ ಶಾಖೆ ಎಕ್ಕಾರು ಆಶ್ರಯದಲ್ಲಿ ರಕ್ತದಾನ ಶಿಬಿರ,ಉಚಿತ ಕಣ್ಣಿನ ತಪಾಸಣಾ ಶಿಬಿರ, ಅಂಚೆ ಜನಸಂಪರ್ಕ ಅಭಿಯಾನ

ಬಜಪೆ:ಹಿಂದೂ ಯುವ ಸೇನೆ ಶ್ರೀದುರ್ಗಾ ಶಾಖೆ ಎಕ್ಕಾರು ಇದರ ಆಶ್ರಯದಲ್ಲಿ ಅ.4 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ತನಕ  ಎಕ್ಕಾರು ಬಂಟರ ಭವನದಲ್ಲಿ  ಯೆನಪೊಯಾ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಸಹಯೋಗದಲ್ಲಿ  6 ನೇ ವರ್ಷದ ರಕ್ತದಾನ ಶಿಬಿರ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು  ಸಹಯೋಗದಲ್ಲಿ  ಉಚಿತ ಕಣ್ಣಿನ ತಪಾಸಣೆ, ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗ ಇವರ ಸಹಯೋಗದೊಂದಿಗೆ ಅಂಚೆ ಜನ ಸಂಪರ್ಕ ಅಭಿಯಾನ ,ಆಧಾರ್ ಕಾರ್ಡ್ ಉಚಿತ ನೋಂದಣೆ ,ತಿದ್ದುಪಡಿಯು ನಡೆಯಲಿದೆ.ಮಧ್ಯಾಹ್ನ 11 ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಂಸದ ಕ್ಯಾ.ಬೃಜೇಶ್ ಚೌಟ,ಶಾಸಕ ಉಮಾನಾಥ ಕೋಟ್ಯಾನ್ ,ವಿಧಾನ ಪರಿಷತ್ ನ  ಶಾಸಕ ಕಿಶೋರ್ ಕುಮಾರ್,ಹಿಂದೂ ಯುವ ಸೇನೆಯ ಕೇಂದ್ರೀಯ ಸಮಿತಿಯ ಗೌರವಾಧ್ಯಕ್ಷ  ಭಾಸ್ಕರ ಚಂದ್ರ ಶೆಟ್ಟಿ,ಅಧ್ಯಕ್ಷ ಯಶೋಧರ ಚೌಟ,ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ,  ಹಾಗೂ ಗಣ್ಯಾತೀಗಣ್ಯರು ಉಪಸ್ಥಿತಲಿರುವರು.ಕಾರ್ಯಕ್ರಮದಲ್ಲಿ ಗುರುರಾಜ್ ಮಲ್ಲಿಗೆಯಂಗಡಿ,ಲೋಕಯ್ಯ ಸಾಲ್ಯಾನ್ ,ಶೈಲೇಶ್ ಅಂಚನ್,ಕು.ಜಯಲಕ್ಷ್ಮೀ ಜಗದೀಶ ಆಚಾರ್ಯ,ಕು.ತೃಪ್ತಿ.ಎಸ್ ಶೆಟ್ಟಿ,ಕು.ರಚನಾ ರವರಿಗೆ ಗೌರವಾರ್ಪಣೆ ನಡೆಯಲಿದೆ.