Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ದಸರಾ ಮಹೋತ್ಸವ ಸಮಿತಿ ಎಕ್ಕಾರು ಇದರ 68 ನೇ ವರ್ಷದ ದಸರಾ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಶಿವಾನಂದ ಶೆಟ್ಟಿನಡ್ಯೋಡಿ ಗುತ್ತು ಆಯ್ಕೆ

ಬಜಪೆ:ದಸರಾ ಮಹೋತ್ಸವ ಸಮಿತಿ  ಎಕ್ಕಾರು ಇದರ  68 ನೇ ವರ್ಷದ ದಸರಾ ಮಹೋತ್ಸವ ಸಮಿತಿಯ  ನೂತನ ಪದಾಧಿಕಾರಿಗಳ ಆಯ್ಕೆಯು ಎಕ್ಕಾರು ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಭಾನುವಾರ ನಡೆಯಿತು. ನೂತನ ಅಧ್ಯಕ್ಷರಾಗಿ  ಶಿವಾನಂದ ಶೆಟ್ಟಿ, ನಡ್ಯೋಡಿ ಗುತ್ತು  ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ  ನಿತಿನ್ ಹೆಗ್ಡೆ (ತಿಮ್ಮ ಕಾವ)  ಕಾವರ ಮನೆ ಎಕ್ಕಾರು, ಜಗದೀಶ್ ರಾವ್ ಎಕ್ಕಾರು, ಉದಯ ಪ್ರಕಾಶ್ ನಾಯಕ್ ಎಕ್ಕಾರು, ರತ್ನಾಕರ ಶೆಟ್ಟಿ ಬಡಕರೆ ಬಾಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ  ವಿಜಯ ಪ್ರಸಾದ್ ಶೆಟ್ಟಿ ಎಕ್ಕಾರು, ಕೋಶಾಧಿಕಾರಿಯಾಗಿ  ಪ್ರದೀಪ್ ಶೆಟ್ಟಿ ಕಲೆಂಬಿಕರಿಯ ಎಕ್ಕಾರು,ಕಾರ್ಯದರ್ಶಿಯಾಗಿ  ಪ್ರವೀಣ್ ಪೂಜಾರಿ ಕೆಂಚಗುಡ್ಡೆ, ಎಕ್ಕಾರು ಆಯ್ಕೆಯಾದರು.