Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಉಲ್ಲಂಜೆಯಲ್ಲಿ ನವೀಕರಣಗೊಂಡ ಬಸ್ ತಂಗುದಾಣ ಲೋಕಾರ್ಪಣೆ

ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದ ಉಲ್ಲಂಜೆಯ ಬಸ್ ತಂಗುದಾಣವೊಂದು ಹಳೆಯದಾಗಿದ್ದು, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅಸಾಧ್ಯವಾದ ಸ್ಥಿತಿಯನ್ನು ಮನಗಂಡ  ಉಳ್ಳಂಜೆ ಫ್ರೆಂಡ್ಸ್ ನ ಸದಸ್ಯರುಗಳು ತಮ್ಮ ಬಿಡುವಿನ ವೇಳೆಯಲ್ಲಿ   ಸ್ಥಳೀಯರ ಸಹಕಾರದಲ್ಲಿ ದುರಸ್ತಿಗೊಳಿಸಿ ಸುಂದರವಾಗಿ ನವೀಕರಿಸಿ ಊರಿನ ಗಣ್ಯರ ಮೂಲಕ ಲೋಕಾರ್ಪಣೆಗೊಳಿಸಿದ್ದಾರೆ.
ಈ ಸಂದರ್ಭ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ  ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ,ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನದ  ಜಯರಾಮ್ ಮುಕ್ಕಾಲ್ದಿ, ಶ್ರೀದೇವಿ ಪ್ರಸಾದ್ ಶೆಟ್ಟಿ ಕೊಡೆ ತ್ತೂರು ,ಪ್ರೇಮ್ ರಾಜ್ ಶೆಟ್ಟಿ ,ಮೂರು ಕಾವೇರಿ ಮಹಾಮಾಯಿ ದೇವಸ್ಥಾನದ ಕೃಷ್ಣಪಾತ್ರಿ, ಕಿನ್ನಿಗೋಳಿ ಪಟ್ಟಣಪಂಚಾಯತ್ ಸದಸ್ಯರಾದ  ಲೋಕಯ್ಯ ಸಾಲಿಯನ್ ಕೊಂಡೆಲಾ,
  ಶೈಲೇಶ್ ಅಂಚನ್ , ಪ್ರಕಾಶ್ ಕಿನ್ನಿಗೋಳಿ ,ಯುವಶಕ್ತಿ ಫ್ರೆಂಡ್ಸ್ ನ  ಅಧ್ಯಕ್ಷ  ಉಮಾನಾಥ ಶೆಟ್ಟಿ, ವಾಸು ಪೂಜಾರಿ, ಪುರುಷೋತ್ತಮ ದಾಸ್, ಸ್ಥಳೀಯರಾದ ಶ್ರೀಮತಿಲಕ್ಷ್ಮಿ ಪೂಜಾರ್ತಿ, ನಾಗವೇಣಿ, ಉಲ್ಲಂಜೆ ಫ್ರೆಂಡ್ಸ್ ನ  ಪುಷ್ಪರಾಜ್, ಯಶೋಧರ್, ಸಂದೇಶ್, ರತ್ನಾಕರ್, ನವೀನ್ ಕುಲಾಲ್, ಯಶೋಧರ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.