Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ದೇವಾಡಿಗ ಸಮಾಜ ಬಾಂಧವರ ಜನಗಣತಿ ಅಭಿಯಾನ ಕ್ಕೆ ಚಾಲನೆ

ಉಡುಪಿ:ವಿಶ್ವ ದೇವಾಡಿಗ ಮಹಾ ಮಂಡಲ ಬಾರಕೂರು ಇದರ ವತಿಯಿಂದ ಡಿ. 20 ರ  ಆದಿತ್ಯವಾರದಂದು  ದೇವಾಡಿಗರ ಸೇವಾ ಸಂಘ (ರಿ) ಉಡುಪಿ ಇದರ ಬಳಿ ಇರುವ ಮಹಾತ್ಮ ಗಾಂಧಿ ಬಯಲು ರಂಗ ವೇದಿಕೆಯಲ್ಲಿ ನಡೆಯಲಿರುವ ವಿಶ್ವ ದೇವಾಡಿಗ ಮಹಾ ಅಧಿವೇಶನದ ಪೂರ್ವಬಾವಿಯಾಗಿ ದೇವಾಡಿಗ ಸಮಾಜ ಬಾಂಧವರ ಜನಗಣತಿ ಅಭಿಯಾನ ಕ್ಕೆ ವಿಶ್ವ ದೇವಾಡಿಗ ಮಹಾ ಮಂಡಲದ ಅಧ್ಯಕ್ಷ  ಧರ್ಮಪಾಲ್ ಉ. ದೇವಾಡಿಗ ರವರು  ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರಕೂರು ಇದರ ಪ್ರಾಂಗಣದಲ್ಲಿ ಚಾಲನೆ  ನೀಡಿದರು.ಬಳಿಕ  ಮಾತನಾಡಿದ ಅವರು  ದೇವಾಡಿಗರ ಜನಸಂಖ್ಯೆಯಲ್ಲಿ ಸರಕಾರದ ಅಂಕಿ ಅಂಶಗಳಲ್ಲಿ ಗೊಂದಲವಿದ್ದು  ಇದನ್ನು ನಿಖರವಾಗಿ ತಿಳಿಯಲು ಇದು ಸಹಕರಿಯಾಗಲಿದೆ ಎಂದರು ಅಧಿವೇಶನದ ಕಾರ್ಯನಿರ್ವಾಹನ ಉಪಾಧ್ಯಕ್ಷ  ಜನಾರ್ದನ ಉಪ್ಪುಂದ ಅವರು ಅಭಿಯಾನ ಯಾಕೆ ಅಗತ್ಯವೆಂದು ತನ್ನ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾ ಮಂಡಳದ ಗೌರವ ಪ್ರಧಾನ ಕಾರ್ಯದರ್ಶಿ  ಹಿರಿಯಡ್ಕ ಮೋಹನದಾಸರವರು ಜನಗಣತಿ ಅರ್ಜಿಯನ್ನು ಸಂಪೂರ್ಣ ಭರ್ತಿಗೊಳಿಸಲು ಕಿವಿ ಮಾತು ಹೇಳಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.ಉಪಾಧ್ಯಕ್ಷರುಗಳಾದ   ಪಡುಕೋಣೆ ಹಾಗೂ ರಘುರಾಮ ದೇವಾಡಿಗ ಆಲೂರು ಜನ ಗಣತಿಯ ಬಗ್ಗೆ ವಿವರಣೆ ನೀಡಿದರು.ಜನಗಣತಿ ಆಂದೋಲನದ ಸಂಚಾಲಕ  ವಿಜಯ ಕೊಡವೂರು ಅಭಿಯಾನವನ್ನು ಒಂದು ತಿಂಗಳ ಒಳಗೆ ಮುಗಿಸಲು ಎಲ್ಲಾ ಸಂಘಗಳ ಸಹಕಾರವನ್ನು ಯಾಚಿಸಿದರು. ವೇದಿಕೆಯಲ್ಲಿ ಕಾರ್ಯನಿರ್ವಾಹನ ಉಪಾಧ್ಯಕ್ಷ  ಜನಾರ್ದನ ಪಡುಪಣಂಬೂರು ಕೋಶಾಧಿಕಾರಿ  ಸುರೇಶ್ ಕೊಡವೂರು ಉಪಸ್ಥಿತರಿದ್ದರು. ವಿವಿಧ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಂಡಲದ ಪ್ರಧಾನ ಕಾರ್ಯದರ್ಶಿ ಗಣೇಶ್ ಅಂಬಲಪಾಡಿ ಸ್ವಾಗತಿಸಿದರು.
ಜೊತೆ ಕಾರ್ಯದರ್ಶಿ  ಯಾದವ ದೇವಾಡಿಗರು ವಂದನಾರ್ಪಣೆ ಗೈದರು.