Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಹಬ್ಬದ ಮೊಸರು ಕುಡಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕಿನ್ನಿಗೋಳಿ:ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನಡೆಯುವ  ಮೊಸರು ಕುಡಿಕೆ ಹಾಗೂ  ಸಾಂಸ್ಕೃತಿಕ  ಕಾರ್ಯಕ್ರಮಕ್ಕೆ ದೇವಳದ  ಪ್ರಧಾನ ಅರ್ಚಕ  ಟಿ ಕೆ ಮಧುಸೂಧನ ಆಚಾರ್ ದೀಪ ಪ್ರಜ್ವಲನೆಯ ಮೂಲಕ  ಚಾಲನೆ ನೀಡಿ ಕಾರ್ಯಕ್ರಮಕ್ಕೆ  ಶುಭ ಹಾರೈಸಿದರು.  ಸೆ.15 ರಂದು ಸಂಜೆ 4 ಗಂಟೆಗೆ ವಿವಿಧ ಸಂಘ  ಸಂಸ್ಥೆ ಹಾಗೂ ವೈಯಕ್ತಿಕ  ಸಾಂಸ್ಕೃತಿಕ ಕಾರ್ಯಕ್ರಮಗಳು ಕರಡಿ, ಸಿಂಹ ಹಾಗೂ ಹುಲಿ ವೇಷದ ಕುಣಿತ ನಂತರ ಗಣಪತಿ ವಿಸರ್ಜನೆ ನಡೆಯಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ  ಗುರುರಾಜ್ ಎಸ್. ಪೂಜಾರಿ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಸಂಪತ್ ಜೆ ಶೆಟ್ಟಿ, ಅಶೋಕ್ ಕುಂದರ್, ಸವಿತಾ ಶರತ್, ಶೋಭಾ ವಿ ಅಂಚನ್ , ನಿಕಟಪೂರ್ವ  ಅಧ್ಯಕ್ಷರು ಹರಿದಾಸ್ ಭಟ್, ನಿಕಟಪೂರ್ವ ಸದಸ್ಯರಾದ ಪುರುಷೋತ್ತಮರಾವ್ , ಲೋಕಯ್ಯ ಸಾಲ್ಯಾನ್,  ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಪುರುಷೋತ್ತಮ ಕೋಟ್ಯಾನ್ ವಂದಿಸಿದರು.